ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ನಿತ್ಯಾನಂದ ನಾಯರಿ ಕಾರ್ತಟ್ಟು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಗೌರವಧ್ಯಾಕ್ಷರಾಗಿ ಚಂದ್ರ ಶೇಖರ ಕಾರಂತ ಕಾರ್ತಟ್ಟು, ಉಪಾಧ್ಯಕ್ಷರಾಗಿ ಶ್ಯಾಮ ಸುಂದರ್ ನಾಯರಿ, ಕಾರ್ಯದರ್ಶಿ ಶಿವಾನಂದ ನಾಯರಿ, ಕೋಶಾಧಿಕಾರಿ ರೇವತಿ ಶ್ಯಾಮ ಸುಂದರ್, ಸಂಘಟನಾ ಕಾರ್ಯದರ್ಶಿಗಳಾಗಿ ರಾಧಾಕೃಷ್ಣ ಬ್ರಹ್ಮಾವರ, ಕ್ರೀಡಾ ಕಾರ್ಯದರ್ಶಿ ಸತ್ಯನಾರಾಯಣ ಆಚಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸ್ನೇಹ ವೆಂಕಟೇಶ್ ಆಯ್ಕೆಯಾದರು.
ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಸಂಸ್ಥೆಯು ಅಶಕ್ತರಿಗೆ ಆರ್ಥಿಕ ನೆರವು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಮುಂತಾದ ಕಾರ್ಯಗಳನ್ನು ಮಾಡುತ್ತ ಸಂಸ್ಥೆಯು ಎಪ್ರಿಲ್ ತಿಂಗಳಿನಲ್ಲಿ ವಾರ್ಷಿಕೋತ್ಸವ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿತು ಎಂದು ಕಲಾರಾಂಗದ ಜೊತೆ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.











