ಉಡುಪಿ: ಡಾ ಅರುಣ್ ಕುಮಾರ್ ದಾರಿಯಲ್ಲಿ ಸಾಗುವೆ : ನೂತನ ಎಸ್ಪಿ ಹರಿರಾಂ ಶಂಕರ್

0
359

Click Here

Click Here

ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಕುಂದಾಪುರದ ಮಾಜೀ ಎಸಿಪಿಯಾಗಿದ್ದ ಹರಿರಾಂ ಶಂಕರ್ ಮೊದಲ ಸುದ್ಧಿಗೋಷ್ಟಿಯನ್ನು ನಡೆಸಿ ಈ ಹಿಂದಿನ ಎಸ್ಪಿ ಡಾ. ಅರುಣ್ ಕುಮಾರ್ ಅವರು ಮಾಡಿರುವ ಸೆಟ್ ಅಪ್ ನ್ನು ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ.

ಕೋಮು ಭಾವನೆಗೆ ಧಕ್ಕೆ ತರುವ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲಾಗುವುದು ಎಂದಿರುವ ಹರಿರಾಂ ಶಂಕರ್, ಈ ಹಿಂದೆ ಕುಂದಾಪುರದಲ್ಲಿ ಎಸಿಪಿಯಾಗಿ ಕೆಲಸ ಮಾಡಿರುವುದರಿಮದ ಉಡುಪಿ ಜಿಲ್ಲೆ ನನಗೆ ಹೊಸದಲ್ಲ. ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿರುವ ಡಾ. ಅರುಣ್ ಕುಮಾರ್ ಎಸ್ಪಿಯಾಗಿ ಉಡುಪಿ ಜಿಲ್ಲೆಯನ್ನು ಯಾವ ರೀತಿ ನಡೆಸಿಕೊಂಡು ಬಂದಿರುವ ದಾರಿಯಲ್ಲಿಯೇ ಮುಂದೆ ಸಾಗುವೆ. ಯಾವುದೇ ಅಕ್ರಮ ಚಟುವಟಿಕೆಗಳು, ಅಪರಾಧ ಪ್ರಕರಣಗಳು, ರೌಡಿಸಂ ನಂತಹಾ ಚಟುವಟಿಕೆಗಳು ಕಂಡು ಬಂದಲ್ಲಿ ನನ್ನ ಗಮನಕ್ಕೆ ನೇರವಾಗಿ ತನ್ನಿ. ದಿನದ 24 ಗಂಟೆಗಳೂ ನಾನು ನಿಮ್ಮ ಸಂಪರ್ಕಕ್ಕೆ ಲಭ್ಯವಿದ್ದೇನೆ ಎಂದರು.

Click Here

ಜಿಲ್ಲೆಯ ಜನತೆಗೆ ಮನವಿ ಮಾಡಿದ ಅವರು, ಯಾವುದೇ ಅಹಿತಕರ, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ಮತ್ತು ಅತಂಹ ಘಟನೆಗಳಿಗೆ ಬೆಂಬಲ ನೀಡಬೇಡಿ. ಕಾನೂನು ಸುವಯವಸ್ಥೆ ಕಾಪಾಡಲು ಪೊಲೀಸರಿಗೆ ಅವಕಾಶ ಕೊಡಿ. ನಮ್ಮ ಜೊತೆ ಜಿಲ್ಲೆಯ ಜನ ನಿಲ್ಲಬೇಕು ಎಂದರು

Click Here

LEAVE A REPLY

Please enter your comment!
Please enter your name here