ಮನೆ ಮನೆಯಲ್ಲೂ ಹಸಿರು ಕ್ರಾಂತಿ ಪಸರಿಸಲಿ – ಪ್ರಭಾಕರ್ ಮೆಂಡನ್
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಮನುಕುಲ ತಮ್ಮ ಉಸಿರನ್ನು ಚೆಲ್ಲುತ್ತಿದ್ದಾನೆ ಇದರ ದುಷ್ಪರಿಣಾಮ ಪ್ರಸ್ತುತ ಅನುಭವಿಸುತ್ತಿದ್ದೇವೆ. ಇದಕ್ಕಾಗಿ ನಾವುಗಳು ಇಂದಿನಿಂದಲೇ ಪ್ರತಿಯೊಬ್ಬರು ಗಿಡ ನೆಡುವ ಸಂಕಲ್ಪ ಮಾಡಬೇಕು ಎಂದು ಕೋಡಿ ಗ್ರಾಮಪಂಚಾಯತ್ ಪೂರ್ವಾಧ್ಯಕ್ಷ ಸದಸ್ಯ ಪ್ರಭಾಕರ್ ಮೆಂಡನ್ ನುಡಿದರು.
ಕೋಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಕೋಟದ ಪಂಚವರ್ಣ ಸಂಘಟನೆ ಇವರ ಸಂಯೋಜನೆಯೊಂದಿಗೆ, ಶಿಶುಅಭಿವೃದ್ದಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ಸಹಕಾರದೊಂದಿಗೆ ಮೂರು ತಿಂಗಳ ಪರಿಸರಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಹಸಿರಿದ್ದರೆ ನಾವುಗಳು ಬದುಕಲು ಸಾಧ್ಯ. ಆದರೆ ಆ ಹಸಿರು ನಮ್ಮ ಮನೆಮನೆಯಲ್ಲೂ ಸೃಷ್ಠಿಸಬೇಕಿದೆ. ಆಗ ಮಾತ್ರ ತಾಪಮಾನ ಕಡಿಮೆಗೊಳಿಸಿ ಆಕ್ಸಿಜನ್ ಪ್ರಮಾಣ ಹೆಚ್ಚಿಸಬಹುದಾಗಿದೆ. ಈ ಮೂಲಕ ಪಂಚಾಯತ್ ಒಂದು ಹೆಜ್ಜೆಮುಂದಿರಿಸಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪಂಚವರ್ಣದ ಪರವಾಗಿ ರವೀಂದ್ರ ಕೋಟ ಹಸಿರು ಜೀವ ಅಭಿಯಾನದ ಕುರಿತು ಸಮಗ್ರ ಮಾಹಿತಿ ನೀಡಿ ಇಡೀ ಜಿಲ್ಲೆಗೆ ಮಾದರಿ ಎಂಬಂತೆ ಒಂದು ಪಂಚಾಯತ್ ಮೂರು ತಿಂಗಳುಗಳ ಕಾಲ ಗಿಡ ನಡುವ ಹಸಿರು ಜೀವ ಸಂಕಲ್ಪ ಯೋಜನೆ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಕೋಡಿಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಅಧ್ಯಕ್ಷತೆ ವಹಿಸಿ ಗಿಡ ವಿತರಿಸಿ ಹಸಿರು ಜೀವ ಅಭಿಯಾನವನ್ನುಉದ್ಘಾಟಿಸಿದರು.
ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ.ಪಿ, ಸತೀಶ್ ಕುಂದರ್, ಕೋಟದ ಪಂಚವರ್ಣದ ಪ್ರಮುಖರಾದ ಕೇಶವ ಆಚಾರ್ ಕೋಟ , ಶಿಶು ಅಭಿವೃದ್ಧಿ ಇಲಾಖೆಯ ಲಕ್ಷ್ಮೀ , ಹಸಿರು ಅಭಿಯಾನದ ರೂವಾರಿಗಳಾದ ಅಂಗನವಾಡಿ, ಸಂಜೀವಿನಿಯ ಸೇನಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರ್ವಹಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಸಿರು ಜೀವ ಅಭಿಯಾನ ಕೋಡಿ ಭಾಗದ ಮಾರ್ಗದರ್ಶಿ ಯಮುನಾ ಎಲ್ ಕುಂದರ್ ವಂದಿಸಿ ತಮ್ಮ ಹಸಿರು ಅಭಿಯಾನದ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.











