ಮುಂದಿನ ಪೀಳಿಗೆಗಾಗಿ ಹಸಿರು ಬೆಳೆಸಿ – ಆನಂದ್ ಸಿ ಕುಂದರ್
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮನು ಕುಲ ಅಥವಾ ಮುಂದಿನ ತಲೆಮಾರು ಉಳಿಯಬೇಕಾದರೆ ಹಸಿರು ಅಗತ್ಯವಾಗಿ ನೆಟ್ಟು ಪೋಷಿಸಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕರೆ ನೀಡಿದರು.
ಗುರುವಾರ ಸಾಲಿಗ್ರಾಮದ ತೊಡ್ಕಟ್ಟು ಹೊಸಬದುಕು ಆಶ್ರಮದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ, ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಉಡುಪಿ ಜಿಲ್ಲೆಯ ಸಾಲಿಗ್ರಾಮದ ಹೊಸಬದುಕು ಆಶ್ರಮ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ ಇವರ ಸಹಯೋಗದೊಂದಿಗೆ ವಿಶ್ವಪರಿಸರದ ಅಂಗವಾಗಿ ಗಿಡ ವಿತರಣೆ, ನೆಡುವ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಗಿಡ ಹಸ್ತಾಂತರಿಸಿ ಮಾತನಾಡಿ ಪ್ರಸ್ತುತ ವಾತಾವರಣದ ವ್ಯತ್ಯಾಸ ನೋಡಿದರೆ ಮುಂದಿನ ಕಾಲಘಟ್ಟದ ಭೀಕರತೆ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಈಗಾಲೇ ಅದನ್ನು ನಾವುಗಳು ಅನುಭವಿಸುತ್ತಿದ್ದೇವೆ, ಆದರೆ ಪಂಚವರ್ಣದಂತಹ ಸಂಸ್ಥೆ ಪರಿಸರವನ್ನು ಪ್ರೀತಿಸಿ, ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತೆ ಪ್ರತಿಯೊಬ್ಬರು ನಮ್ಮ ಮಕ್ಕಳಮೊಮ್ಮಕ್ಕಳಿಗೆ ಪರಿಸರ ಸಂಪತ್ತನ್ನು ಸೃಷ್ಠಿಸುವ ಬಗೆಯನ್ನು ತಿಳಿಸಬೇಕಿದೆ. ಇದು ಭಗವಂತನಿಗೆ ಪ್ರಾರ್ಥಿಸದಷ್ಟೆ ಶ್ರೇಷ್ಠವಾದ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ,ಹೊಸಬದುಕು ಆಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಸಾಸ್ತಾನ, ನಿರ್ದೇಶಕಿ ರಾಜೇಶ್ವರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ. ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ಯುವಕ ಮಂಡಲದ ಸದಸ್ಯ ಕೇಶವ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು. ಉಪಾಧ್ಯಕ್ಷ ದಿನೇಶ್ ಆಚಾರ್ ಸಹಕರಿಸಿದರು.











