ಕುಂದಾಪುರ: ಮಕ್ಕಳ ಸುರಕ್ಷತೆಗೆ ಸಂಚಾರಿ ಪೊಲೀಸ್ ಕ್ರಮ – ಬೆಳ್ಳಂಬೆಳಗ್ಗೆ ತಪಾಸಣೆಗಿಳಿದ ಪೊಲೀಸರು

0
1126

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇತ್ತೀಚೆಗಷ್ಟೇ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನಗಳು ಆಟೋರಿಕ್ಷಗಳ ಚಾಲಕ ಮತ್ತು ಮಾಲಕರ ಜೊತೆ ಸಭೆ ನಡೆಸಿದ ಕುಂದಾಪುರ ಸಂಚಾರಿ ಪೊಲೀಸರು ಇಂದಿನಿಂದ ಕಾರ್ಯಾಚರಣೆಗಿಳಿದಿದ್ದಾರೆ.

ತಾಲೂಕಿನ ವಿವಿಧ ಖಾಸಗಿ ಶಾಲೆಗಳು ಆದರೆ ಮಿತಿಮೀರಿದ ವಿದ್ಯಾರ್ಥಿಗಳನ್ನು ತುಂಬಿಸುವುದರಿಂದ ಮತ್ತು ಅತಿಯಾದ ವೇಗ ನಿಯಂತ್ರಣವಿಲ್ಲದ ಕ್ರಾಸಿಂಗ್ ಇವೆಲ್ಲವನ್ನು ಗಮನಿಸಿದ ಕುಂದಾಪುರ ಸಂಚಾರಿ ಪೊಲೀಸರು ಶಾಲಾ ವಾಹನಗಳ ಮತ್ತು ಆಟೋರಿಕ್ಷಗಳ ಮೇಲೆ ದಕ್ಷಿಣ ಗ್ರಾಮಕ್ಕೆ ಮುಂದಾಗಿದ್ದಾರೆ.

Click Here

ಮಿತಿಮೀರಿದ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವ ಆಟೋರಿಕ್ಷಾ ಮತ್ತು ಶಾಲಾ ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಅಪರಾಧ ಮರುಕಳಿಸಿದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ತಂಡ ಕಾರ್ಯಾಚರಣೆಗಿಳಿದಿದೆ. ಕೆಲವು ಆಟೋ ರಿಕ್ಷಾಗಳಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೊಂಡಲಾಗುತ್ತಿರುವುದು ಕಂಡುಬಂದಿದೆ. ಶಾಲಾ ವಾಹನಗಳಲ್ಲೂ 55ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ವಿರುದ್ಧ ದಂಡ ವಿಧಿಸಲಾಗುತ್ತಿದೆ.

ಕುಂದಾಪುರ ತಾಲೂಕಿನ ಎಲ್ಲೆಡೆ ಈ ಪೊಲೀಸ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Click Here

LEAVE A REPLY

Please enter your comment!
Please enter your name here