ಕುಂದಾಪುರ :ತುಳಸಿ ವಿದ್ಯಾ ಮಂದಿರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಮಂತ್ರದೀಕ್ಷಾ ಕಾರ್ಯಕ್ರಮ

0
458

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಮಂತ್ರದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಶ್ರೀ ಶ್ರೀನಿವಾಸ ಹಾಗೂ ಶ್ರೀ ಕೇಶವ ಅಡಿಗರ ನೇತೃತ್ವದಲ್ಲಿ ಮಕ್ಕಳಿಗೆ ದೀಕ್ಷಾ ಕಾರ್ಯಕ್ರಮ ನೆರವೇರಿತು. ಪಾಲಕರು ಮಕ್ಕಳ ಬೆರಳನ್ನು ಹಿಡಿದು ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಯುವ ಮೂಲಕ ಅಕ್ಷರಾಭ್ಯಾಸವನ್ನು ಮಾಡಿಸಿದರು.

Click Here

ಈ ಕಾರ್ಯಕ್ರಮವು ಮಕ್ಕಳಲ್ಲಿ ಅಕ್ಷರಗಳ ಬಗ್ಗೆ ಆಸಕ್ತಿಯನ್ನು ಮೂಡಿಸಲು ಜ್ಞಾನದ ಹಸಿವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ತದನಂತರ ತುಳಸಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣರಾಯ ಶಾನುಬಾಗ್ ರವರು ಮಕ್ಕಳಿಗೆ ಮಂತ್ರದೀಕ್ಷೆಯನ್ನು ನೀಡುತ್ತಾ ಎಲ್ಲಿ ದೇವರಿಗೆ ಪೂಜೆ ನಡೆಯುತ್ತದೆಯೋ ಅದೇ ಮಂದಿರ. ಮಕ್ಕಳಿಗೆ ದೇವ ಮತ್ತು ದೇಹ ಶ್ರದ್ಧೆಯನ್ನು ಕಲಿಸಬೇಕು. ಅದಕ್ಕಾಗಿ ಮಂತ್ರದೀಕ್ಷೆ ಅವಶ್ಯಕ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರೇಷ್ಮಾ ಪ್ರದೀಪ್, ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ – ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here