ಗೋಳಿಯಂಗಡಿ :ಪತ್ನಿಯನ್ನು ಕೊಂದ ಪತಿ – ಆರೋಪಿ ಬಂಧನ

0
3213

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹೆಂಡತಿಯೊಂದಿಗೆ ತಕರಾರು ತೆಗೆದು ಗಲಾಟೆ ನಡೆಸಿ ಮಾತಿಗೆ ಮಾತು ಬೆಳೆದು ಉದ್ರೇಕಗೊಂಡ ಪತಿ ಪತ್ನಿಯನ್ನೇ ಹೊಡೆದು ಕೊಂದ ಘಟನೆ ಗುರುವಾರ ತಡರಾತ್ರಿ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿಲಿಯಾಣ ಎಂಬಲ್ಲಿ ನಡೆದಿದೆ. ಇಲ್ಲಿನ ದರ್ಕಾಸು ನಿವಾಸಿ ಗಣೇಶ್ ಪೂಜಾರಿ(43) ಎಂಬಾತನೇ ಪತ್ನಿಯನ್ನು ಕೊಂದ ಆರೋಪಿ. ಗಣೇಶ್ ಪೂಜಾರಿ ಪತ್ನಿ ರೇಖಾ ಪೂಜಾರಿ(26) ಪತಿಯಿಂದ ಕೊಲೆಯಾದ ದುರ್ದೈವಿ.

Click Here

ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಗುರುವಾರ ತಡರಾತ್ರಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿ ಯೊಂದಿಗೆ ಜಗಳಕ್ಕೆ ನಿಂತಿದ್ದ. ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಗಣೇಶ್ ಪೂಜಾರಿ ಹೊಡೆದಿದ್ದು ತಲೆಗೆ ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಶಂಕರನಾರಾಯಣ ಪೊಲೀಸರು ಹುಡುಕಾಡಿ ಕೊನೆಗೆ ಶಂಕರನಾರಾಯಣದಲ್ಲಿ ಬಂಧಿಸಿದ್ದಾರೆ ಇಂದು ತಿಳಿದು ಬಂದಿದೆ ಕೊಲೆಯಾದ ರೇಖಾ ಪೂಜಾರಿ ಹಾಗೂ ಆರೋಪಿ ಗಣೇಶ ಪೂಜಾರಿ ದಂಪತಿಗಳಿಗೆ ಒಬ್ಬ 6 ವರ್ಷ ಮತ್ತು ಇನ್ನೊಬ್ಬ 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here