ಹಕ್ಲಾಡಿ : ವನಮಹೋತ್ಸವ – ಮನೆಗೊಂದು ಸಸಿ ನೆಡುವ ಅಭಿಯಾನ

0
123

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಹಕ್ಲಾಡಿಯ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಅನೇಕ ರೀತಿಯ ನೆರವನಿತ್ತ ದಾನಿ ದಿ| ಭಾಸ್ಕರ್ ಶೆಟ್ಟಿ ಅವರ 66 ನೇ ಜನ್ಮದಿನದ ಅಂಗವಾಗಿ ಬುಧವಾರ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಫಾರೆಸ್ಟ್ ಎಸ್‌ಒಎಸ್ ಎನ್‌ಜಿಒ, ಭಾಸ್ಕರ ಶೆಟ್ಟರ ಅಭಿಮಾನಿ ಬಳಗ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ವನಮಹೋತ್ಸವ – ‘ಮನೆಗೊಂದು ಸಸಿ’ ನೆಡುವ ಅಭಿಯಾನ ನಡೆಯಿತು.

Click Here

ಮನೆಗೊಂದು ಸಸಿ ಅಭಿಯಾನದಡಿಯಲ್ಲಿ ಸಾವಿರಕ್ಕೂ ಮಿಕ್ಕಿ ಸಸಿಗಳನ್ನು ವಿತರಣೆ ಮಾಡಲಾಯಿತು. ಗ್ರಾಮಸ್ಥರು ಉತ್ಸಾಹದಿಂದ ಈ ಅಭಿಯಾನಕ್ಕೆ ಕೈಜೋಡಿಸಿದರು.
ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಣ್ಣಿನ ಆಟ ಮತ್ತು ವನ್ಯಜೀವಿ ಅರಿವು ಕಾರ್ಯಾಗಾರಗಳಲ್ಲಿ ಪಾಲ್ಗೊಂಡರು. ಬೆಂಗಳೂರಿನ ಗಣೇಶ್ ಶ್ರೀನಿವಾಸನ್ ಮತ್ತು ಬಂಡೀಪುರ ಅರಣ್ಯಾಧಿಕಾರಿ ಮೋಹನ್ ಕುಮಾರ್ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಅರಣ್ಯ ಇಲಾಖೆಯ ಅಧಿಕಾರಿಗಳು, ಊರ ಪ್ರಮುಖರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಭಾಸ್ಕರ ಶೆಟ್ಟರ ಅಭಿಮಾನಿ ಬಳಗದವರು, ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Click Here

LEAVE A REPLY

Please enter your comment!
Please enter your name here