ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜೀವನದಲ್ಲಿ ಮೋಕ್ಷ ಸಾಧನೆ ಪಡೆಯುವುದೇ ಪ್ರಧಾನ ಅಂಶವಾಗಿದ್ದು, ಮೋಕ್ಷ ಸಾಧನೆಗೆ ಭಗವಂತನ ಸಾಕ್ಷಾತ್ಕಾರ ಆಗಬೇಕಾಗಿದ್ದು ಇದಕ್ಕೆ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ದೇಶವನ್ನು ಸುತ್ತುವುದರೊಂದಿಗೆ ಜೀವನದನುಭವವವು ಮೋಕ್ಷ ಸಾಧಿಸಲು ಸಾಧ್ಯ ಎಂದು ವಿದ್ವಾನ್ ಮಂಜುನಾಥ ಭಟ್ ಹರೆಗೋಡು ಹೇಳಿದರು.
ಅವರು ಕಿರಿಮಂಜೇಶ್ವರದ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು (ರಿ.) ಉಪ್ಪುಂದ ವಲಯ ಇದರ ಶ್ರಾವಣ ಸಂದ್ಯಾ ಕಾರ್ಯಕ್ರಮ ಹಾಗೂ ಕಾಶಿ ಸಮಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಹುಟ್ಟಿನಿಂದ ಯಾರು ಬ್ರಾಹ್ಮಣನಾಗಲು ಸಾಧ್ಯವಿಲ್ಲ ಶೋಡಷಕರ್ಮ ನೀಡಿ, ವೇದಗಳ ಅಧ್ಯಯನ ಮೂಲಕ ಎಲ್ಲಾ ವಿದ್ಯಗಳನ್ನು ಕಲಿತು ಸಂಸ್ಕಾರಗಳನ್ನು ಪಡೆದಿದ್ದರೆ ಮಾತ್ರ ಬ್ರಾಹ್ಮಣನಾಗುತ್ತಾನೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಕೊಡೇರಿ ವಾಸುದೇವ ಕಾರಂತರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪ್ಪುಂದ ವಲಯಾದ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್ ಕುಂಭಾಶಿ, ತಾಲೂಕು ಉಪಾಧ್ಯಕ್ಷ ಬಿ. ಗಣೇಶ ಮಯ್ಯ, ಗೌರವಾಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಪ್ರಶಾಂತ ಮಯ್ಯ, ಮಹಿಳಾವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್ ಯುವವೇದಿಕೆ ಅಧ್ಯಕ್ಷ ಪದ್ಮನಾಭ ಹೆಬ್ಬಾರ್ ಉಪಸ್ಥಿತರಿದ್ದರು, ಮಾಜಿ ಅಧ್ಯಕ್ಷ ದೀಟಿ ಸೀತಾರಾಮ ಮಯ್ಯ ಸ್ವಾಗತಿಸಿದರು, ಸುಮಾ ಶ್ಯಾನುಭಾಗ ಪ್ರಾರ್ಥಿಸಿದರು, ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೆಳಿಗ್ಗೆ ಮಹಿಳಾ ವೇದಿಕೆಯವರಿಂದ ವಿಷ್ಣ ಸಹಸ್ರನಾಮ ಪಠಣ, ಕಾಶಿಯಿಂದ ತಂದ ಗಂಗಾಜಲದ ಪೂಜೆ, ಅಪರಾಹ್ನ ಭಜನೆ ಹಾಗೂ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











