ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ ಆ.8ರಂದು ಶುಕ್ರವಾರ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಜರಗಿತು.
ಈ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಬೆಳಿಗ್ಗೆ 9:30ಕ್ಕೆ ಆರಂಭಗೊಂಡಿತು. ಸಾವಿರಾರು ಭಕ್ತರು ಶ್ರೀ ದೇಗುಲದಲ್ಲಿ ನಡೆದ ವಿವಿಧ ಪೂಜಾ ಕಾರ್ಯದಲ್ಲಿ ಭಾಗಿಯಾದರು.
ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರ, ಸಹಸ್ರ ಕುಂಕುಮಾರ್ಚನೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ನೇತೃತ್ವದಲ್ಲಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ದಂಪತಿಗಳು ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡರು.
ಶ್ರೀ ದೇವಿ ಅಮೃತೇಶ್ವರೀ ಗೆ ವರಮಹಾಲಕ್ಷ್ಮೀ ಅಂಗವಾಗಿ ವಿಶೇಷ ಅಲಂಕಾರ ಭಕ್ತ ಮಹಾಶಯನ್ನು ವಿಶೇಷವಾಗಿ ಸೆಳೆಯಿತು.
ದೇಗುಲದ ಟ್ರಸ್ಟಿಗಳಾದ ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ರತನ್ ಐತಾಳ್, ಸುಧಾ ಪೂಜಾರಿ, ಜ್ಯೋತಿ ಡಿ.ಕಾಂಚನ್, ಅರ್ಚಕ ಪ್ರತಿನಿಧಿಗಳಾದ ಸುಬ್ರಾಯ ಜೋಗಿ, ದಿನೇಶ್ ಜೋಗಿ ಮತ್ತಿತರರು ಇದ್ದರು. ಧಾರ್ಮಿಕ ವಿಧಿವಿಧಾನವನ್ನು ವೇ.ಮೂ ಮಧುಸೂದನ ಬಾಯರಿ ನೆರವೆರಿಸಿದರು.











