ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಹಲವುಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ರಂಗೋಲಿಯೊಂದು ಭಕ್ತಾಧಿಗಳ ಮನವ ಕೇಂದ್ರಿಕರಿಸಿತು. ಇಲ್ಲಿನ ಕೋಟತಟ್ಟುವಿನ ಹಂದಟ್ಟು ನಿವಾಸಿ ಕುಮಾರಿ ಪ್ರಜ್ಞಾ.ಜಿ.ಹಂದಟ್ಟು ಗುರುವಿಲ್ಲದೆ ಕಲಿತ ಕಲಾಕೈಂಕರ್ಯದ ಮೂಲಕ ತಾಯಿ ಅಮೃತೇಶ್ವರಿಯ ಸಾನ್ನಿಧ್ಯದಲ್ಲಿ ಶ್ರೀದೇವಿಯ ಸುಂದರ ರಂಗೋಲಿಯೊಂದನ್ನು ಬಿಡಿಸಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕುಮಾರಿ ಪ್ರಜ್ಞಾ ಹಂದಟ್ಟು ಬಿಡಿಸಿದ ಅಮೃತೇಶ್ವರಿ ತಾಯಿಯ ರಂಗೋಲಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಕುಂದರ್, ಈಕೆಯ ಕಲಾಕಾಣಿಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾ ಹಂದಟ್ಟು ಉಡುಪಿಯ ಪಿಪಿಸಿ ಕಾಲೇಜಿನ ಎಂ.ಎಸ್ಸಿ ಪದವೀಧರೆಯಾಗಿದ್ದು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಹೊಂದಿದವರು. ಗುರುವಿಲ್ಲದೆ ತನ್ನ ಸ್ವಂತ ಪರಿಶ್ರಮದಿಂದ, ಆಸಕ್ತಿಯಿಂದ ಸಾಧನೆ ಮಾಡಿರುವುದು ಪ್ರಜ್ಞಾ ಹಂದಟ್ಟು ಈ ಹಿಂದೆ ತಾಯಿ ಕಟೀಲೇಶ್ವರಿ ದೇವಿಯ ಚಿತ್ರ ಸೇರಿದಂತೆ ಚಲನಚಿತ್ರ ನಟ ದೊಡ್ಡಣ್ಣ ,ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರ ಚಿತ್ರ ಬಿಡಿಸಿ ಅವರಿಂದ ಶಹಬ್ಬಾಸ್ ಅನಿಸಿಕೊಂಡವರು. ಈಕೆಯ ಈ ಎಲ್ಲಾ ಸಾಧನೆಗೆ ಹಿಂದೆ ಇವರ ತಾಯಿ ಪೂರ್ಣಪ್ರಜ್ಞಾ ಕಾಲೇಜಿನ ಗ್ರಂಥಪಾಲಕಿ ಗೀತಾ ಪೂಜಾರಿ ಸಾಥ್ ನೀಡುತ್ತಿದ್ದಾರೆ.
ಈ ಹಿಂದೆ ಅನೇಕ ಮಹಾನ್ ಸಾಧಕರ ಚಿತ್ರ ಬಿಡಿಸಿದ್ದೆ ಅಲ್ಲದೆ ಇತ್ತೀಚಿಗೆ ಸ್ವಾಮೀ ಕೊರಗಜ್ಜ,ಮಂಗಳೂರಿನ ಕಟೀಲೇಶ್ವರಿ ದೇವಿಯ ಚಿತ್ರ ಬಿಡಿಸಿದ್ದು ಇಂದು ವರಮಹಾಲಕ್ಷೀ ಅಂಗವಾಗಿ ನಮ್ಮೂರ ತಾಯಿ ಅಮೃತೇಶ್ವರಿಯನ್ನು ರಂಗೋಲಿಯ ಮೂಲಕ ಬಿಡಿಸಿದ್ದೇನೆ ದೇಗುಲದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದು ತನ್ನ ತಾಯಿ ಗೀತಾ ಪೂಜಾರಿ ಬೆನ್ನೆಲುಬಾಗಿ ನಿಂತಿದ್ದಾರೆ – ಪ್ರಜ್ಞಾ ಜಿ. ಹಂದಟ್ಟು ಚಿತ್ರ ಕಲಾವಿದೆ











