ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ.ಲಿ. ಆಯೋಜಿಸಿದ್ದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ ಮೆಟಿಕ್ ಮೂಡಬಿದ್ರೆಯ ಆಳ್ವಾಸ್ ಪಿಯು ಕ್ಯಾಂಪಸ್ ನಲ್ಲಿ ಅ.26ರಂದು ಆಯೋಜಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸದ್ದರು. ಈ ಸ್ಪರ್ಧೆಯಲ್ಲಿ ಜಯಶ್ರೀ ಮತ್ತು ಸದಾನಂದ ಆಚಾರ್ಯ ತಲ್ಲೂರು ಇವರ ಪುತ್ರ, ಜಯರಾಣಿ ಆಂಗ್ಲ ಮಾದ್ಯಮ ಶಾಲೆ ತಲ್ಲೂರು ಇಲ್ಲಿನ 4 ನೇ ತರಗತಿ ವಿದ್ಯಾರ್ಥಿ ಸದ್ವಿನ್ ಎಸ್ ಆಚಾರ್ಯ ತಲ್ಲೂರು ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಕುಂದಾಪುರ ಸೆಂಟರ್ ನ ಮಖ್ಯಸ್ಥ ಪ್ರಸನ್ನ ಕೆ. ಬಿ., ಬೋಧಕಿ ಮಹಾಲಕ್ಷ್ಮಿ ಮತ್ತು ದೀಪಾರವರು ತರಬೇತಿ ನೀಡಿರುತ್ತಾರೆ.











