ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮತ ಕಳ್ಳತನದ ವಿರುದ್ಧ ಸಹಿ ಅಭಿಯಾನಕ್ಕೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಸಂವಿಧಾನಾತ್ಮಕವಾಗಿ, ದೇಶದ ಪ್ರಜೆಗಳಿಗೆ ನೀಡಿದ ಮತದ ಹಕ್ಕು ಕದಿಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಈಗಾಗಲೇ ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಯ ಪೂರ್ವ ನಡೆದ ಅಕ್ರಮಗಳ ವಿರುದ್ಧ ತನಿಖೆಯನ್ನು ಎಸ್ ಐ ಟಿ ನಡೆಸುತ್ತಿದ್ದು , ಪೂರಕ ಸಾಕ್ಷಿಗಳು ದೊರತಿವೆ . ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಜಾಲಗಳ ವಿರುದ್ಧ ಜನ ಜಾಗೃತಿ ನಡೆಸಲು ಸಹಿ ಅಭಿಯಾನವನ್ನು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ನಡೆಸಲಾಗುವುದು ಎಂದು
ನಾಯಕರದ ಮೊಳಹಳ್ಳಿ ದಿನೇಶ್ ಹೆಗ್ಡೆ ಯವರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ , ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಕೇದೂರು ಸದಾನಂದ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೋ , ಮಹಿಳಾ ಬ್ಲಾಕ್ ಅಧ್ಯಕ್ಷರಾದ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ , ಐ ಟಿ ಸೆಲ್ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಶೇರಿಗಾರ್ , ಕುಂದಾಪುರ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ , ಪುರಸಭಾ ಸದಸ್ಯರಾದ ಶ್ರೀಧರ ಶೇರಿಗಾರ್ , ಪ್ರಭಾವತಿ ಶೆಟ್ಟಿ , ಅಶೋಕ್ ಸುವರ್ಣ , ಶಶಿಧರ ಕೋಟೆ , ಸದಾನಂದ ಖಾರ್ವಿ , ಪಂಚಾಯತ್ ಸದಸ್ಯರಾದ ರೋಷನ್ ಬರೆಟ್ಟೊ, ಯುವ ಮುಖಂಡರಾದ ಕೊಡಿ ಸುನಿಲ್ ಪೂಜಾರಿ , ನಟರಾಜ್ ಹೊಳ್ಳ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಅರುಣ್ ಪಟೇಲ್ , ವಿವೇಕಾನಂದ ಇನ್ನಿತರರು ಉಪಸ್ಥಿತರಿದ್ದರು.











