ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಿಕೆ ಸಂಕಷ್ಟಹರ ಚತುರ್ಥಿಯ ಪರ್ವ ದಿನವು ಬಹಳ ವಿಜೃಂಭಣೆಯಿಂದ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಸಮ್ಮುಖದಲ್ಲಿ ಸಹಸ್ರ ನಾರಿಕೆಳ ಗಣಯಾಗ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ 8 ಗಂಟೆಗೆ ಸಾಮೂಹಿಕ ಮಹಾ ಪೂಜೆಯೊಂದಿಗೆ ಸುವರ್ಣ ಪಲ್ಲಕ್ಕಿ ಉತ್ಸವ ರಜತ ರಥೋತ್ಸವ, ಓಲಗಮಂಟಪ ಪೂಜೆ, ಶಯನೋತ್ಸವದೊಂದಿಗೆ ರಾತ್ರಿ ಪೂಜೆ ಸಂಪನ್ನಗೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಶ್ವೇಶ್ವರ ಮಹಿಳಾ ಭಜನಾ ಮಂಡಳಿ ಆನೆಗುಡ್ಡೆ ಕುಂಭಾಸಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ನಾಗರಾಜ್ ಶೇಟ್ ಹಾಗೂ ಬಳಗ ಉಡುಪಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ದೇಗುಲದ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯ, ಕೆ. ನಿರಂಜನ ಉಪಾಧ್ಯಾಯ ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ದೇವಸ್ಥಾನದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











