ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗೋವಾದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಂಕುಕೈ ಕಪ್ 2026 ಕರಾಟೆ ಚಾಂಪಿಯನ್‍ಶಿಷ್‍ನಲ್ಲಿ ಮುಕೆಂಕೈ ಕರಾಟೆ ಡೂ ಫೆಡರೇಷನ್ ಆಫ್ ಇಂಡಿಯಾಗೆ ಸೇರಿದ ವಿದ್ಯಾರ್ಥಿಗಳು ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು.
ವಿವಿಧ ವಿಭಾಗಳಾದ ಕಟಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ಆರು ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು. ಕುಮಿಟೆ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ, ಐವರು ದ್ವಿತೀಯ ಸ್ಥಾನ, ಓರ್ವ ತೃತೀಯ ಸ್ಥಾನ ಪಡೆದು ನಮ್ಮ ಫೆಡರೇಷನ್‍ಗೆ ಹೆಮ್ಮೆ ತಂದಿದ್ದಾರೆ.
ಈ ಸಾಧನೆಗೆ ಮಕ್ಕಳ ಶಿಸ್ತುಬದ್ಧ ತರಬೇತಿ, ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಗುರುಗಳ ಸಮರ್ಪಿತ ಮಾರ್ಗದರ್ಶನವೇ ಮುಖ್ಯ ಕಾರಣವಾಗಿದೆ ಎಂದು ತರಬೇತುದಾರ ಮಂಜುನಾಥ್ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.











