ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಪಡುಕೆರೆ ಇವರಿಂದ ಪಾರಂಪಳ್ಳಿ ಪಡುಕೆರೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬೀಚ್‍ನ ತಟದಲ್ಲಿ ಎರಡು ಸಿಮೆಂಟ್ ಆಸನಗಳನ್ನು ಕೊಡುಗೆಯಾಗಿ ನೀಡಿ ಅದನ್ನು ಗುರುವಾರ ಲೋಕಾರ್ಪಣೆಗೊಳಿಸಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೃಷ್ಣ ದೇವಾಡಿಗ, ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಸಂಸ್ಥೆಯ ಪ್ರಮುಖರಾದ ರವಿ ಪೂಜಾರಿ ಕೃಷ್ಣ. ಪಿ, ರಮೇಶ್ ಪೂಜಾರಿ, ಉಲ್ಲಾಸ್ ಪೂಜಾರಿ, ರತ್ನಾಕರ ಪೂಜಾರಿ ಇದ್ದರು.











