ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಕೆನರಾ ಬ್ಯಾಂಕ್ ವಡ್ದರ್ಸೆ ಶಾಖೆ ವತಿಯಿಂದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕೆನರಾ ಬ್ಯಾಂಕ್ ವಡ್ಡರ್ಸೆ ಇಲ್ಲಿನ ಶಾಖಾ ಪ್ರಬಂಧಕ ರೋಬಿನ್ ಇವರ ಮೂಲಕ ಪೀಠೋಪಕರಣಗಳಾದ ಮೆಟಲ್ ಟೇಬಲ್, ಎವರ್ಗ್ರೀನ್ ಚೇರ್ ಗಳನ್ನು, ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ನಿವೃತ್ತ ಅಧ್ಯಾಪಕರಾದ ಬಾಲಕೃಷ್ಣ ಶೆಟ್ಟಿ ವಡ್ದರ್ಸೆ, ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ್ ಶೆಟ್ಟಿ ಯಾಳಕ್ಲು, ವಡ್ಡರ್ಸೆ ಪ್ರಾಥಮಿಕ ಶಾಲೆಯಲಿ ನಿವೃತ್ತ ಶಿಕ್ಷಕ ಮಂಜಯ್ಯ ಶೆಟ್ಟಿ ಕೊತ್ತಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ್ ಆಚಾರ್ಯ ಉಪಸ್ಥಿತರಿದ್ದರು .
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಸ್ವಾಗತಿಸಿ, ಸಹ ಶಿಕ್ಷಕಿ ಯಶೋದ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು. ಶಿಕ್ಷಕಿಯರಾದ ಪ್ರೇಮ ಸುಪ್ರೀತ ಚೈತ್ರ ಸಹಕರಿಸಿದರು.











