ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಸಂಸ್ಥೆ 2012ರಲ್ಲಿ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ, ಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಗಲಿ, ಸಾಧನೆಯಲ್ಲಿ ಆಗಲಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿರುವ ಸಂಸ್ಥೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲಾ ರಂಗದಲ್ಲಿಯೂ ಕೂಡ ಎಕ್ಸಲೆಂಟ್ ತನ್ನದೇ ಆದ ಚಾಪನ್ನ ಮೂಡಿಸುತ್ತಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಶಿಕ್ಷಣ ಸಂಸ್ಥೆಯಾಗಿದೆ. 2026ರ ಸಿಎಸ್ (ಕಂಪನಿ ಸೆಕ್ರೆಟರಿ) ಎನ್ನುವ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದೆ. ನಮ್ಮ ಸಂಸ್ಥೆಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 21 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಪಾಸಾದ 21 ವಿದ್ಯಾರ್ಥಿಗಳು ಅತ್ಯುತ್ತಮ ಅಂಕವನ್ನು ಪಡೆದು ಸಾಧನೆ ಮಾಡಿದೆ ಎಂದು ಎಕ್ಸಲೆಂಟ್ ಕಾಲೇಜು ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹೇಳಿದರು.
ಅವರು ಶನಿವಾರ ಕಾಲೇಜಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸಿಎಸ್ 200 ಅಂಕದ ಪರೀಕ್ಷೆಯಾಗಿದ್ದು, ಇದರಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ಜಯಸೂರ್ಯ (176) ಅಂಕ, ಆಕಾಶ್ (173) ಅಂಕ, ಅಂಶಿಕ್ (170), ನೇಹಾ (167), ಶೆಟ್ಟಿ ಶ್ರೇಯಸ್ (166), ಸ್ಪೂರ್ತಿ ಶೆಟ್ಟಿಗಾರ್ (164), ಆರ್ಯ (163), ಸುಮಿತ್ ಮರಾಠಿ (163), ನಿಶಾಲ್ (162), ಸಮೃದ್ಧಿ ಶೆಟ್ಟಿ (161), ರಾಹುಲ್ ಪೂಜಾರಿ (160), ಶ್ರೇಯಸ್ ಟಿ (159), ರಶ್ಚಿತ್ ಕುಮಾರ್ (156) ಪ್ರಥಮೇಶ್ ದೇವಾಡಿಗ (151), ನಿಶಾಂತ್ (151), ಆಯುಷ್ (146), ಚರಣ್ ಹೆಚ್ ವಿ (140), ಸಂಚಿತ್ ನಾಯ್ಕ (136), ಯಶಸ್ವಿ ಪಿ ಶೆಟ್ಟಿ (128) ಪ್ರಾಪ್ತಿ ಶೆಟ್ಟಿ (126), ಶ್ರೀಶ್ ಕುಮಾರ್ ಶೆಟ್ಟಿ (122) ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಂಚೂಣಿಗೆ ತಂದು ಅವರಿಂದ ಸಾಧನೆ ಮಾಡಿಸುವುದು ಶಿಕ್ಷಣ ಸಂಸ್ಥೆಗಳ ದ್ಯೇಯವಾಗಿದ್ದು ನಮ್ಮ ಸಂಸ್ಥೆ ಆ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಯಶಸ್ಸನ್ನು ಕಂಡುಕೊಂಡಿದೆ. ಸಿ.ಎಸ್ ಅಂಥಹ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ಅವರನ್ನು ಉತ್ತೀರ್ಣಗೊಳಿಸುವ ಗುರುತರವಾದ ಜವಬ್ದಾರಿ ತಗೆದುಕೊಂಡು ತಕ್ಕುದಾದ ಫಲಿತಾಂಶ ಪಡೆದಿದ್ದೇವೆ ಎಂದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಾ ಶೆಟ್ಟಿ ಮಾತನಾಡಿ, ವಾಣಿಜ್ಯ ವಿಭಾಗದಲ್ಲಿ ಸಿಎ ಫೌಂಡೇಶನ್ ಇರಬಹುದು ಸಿ.ಎಸ್ ಇರಬಹುದು ಈ ಎರಡು ಪರೀಕ್ಷೆಗಳು ಕೂಡಾ ಕಾಮರ್ಸ್‍ನಲ್ಲಿ ಪ್ರವೇಶಾತಿ ವಿಷಯದಲ್ಲಿ ಬಹಳ ಮುಖ್ಯವಾಗುತ್ತದೆ. ಪ್ರತಿದಿನ ಬೋರ್ಡ್ ಎಕ್ಸಾಂಗೆ ತಯಾರಿ ಮಾಡಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧಪಡಿಸುತ್ತೇವೆ. ಸೂಕ್ತ ಕೋಚಿಂಗ್ ನೀಡುತ್ತೇವೆ. ಪಿಪಿಟಿ ಆಧಾರಿತ ಬೋಧನೆಯೊಂದಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತೇವೆ. ಇಲ್ಲಿ 24 ವಿದ್ಯಾರ್ಥಿಗಳು ಕೂಡಾ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಆರ್ಹತೆ ಹೊಂದಿದವರಾದ್ದು, ತಾಂತ್ರಿಕ ಸಮಸ್ಯೆಯಿಂದ ಶೇ.100 ಫಲಿತಾಂಶ ಪಡೆಯಲು ಆಗಲಿಲ್ಲ. ಮರಳಿ ಅವರು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಸಾಧಕ ವಿದ್ಯಾರ್ಥೀಗಳಾದ ನಿಶಾಲ್ ಶೆಟ್ಟಿ, ಸುಮಿತ್ ಮರಾಠಿ ಅನಿಸಿಕೆ ಹಂಚಿಕೊಂಡರು.











