ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಓಕವುಡ್ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿಯಿ ಸಹೋದರಿ ವಿದ್ಯಾರ್ಥಿಗಳಾದ ಪ್ರಗ್ಯಾ ದೇವಾಡಿಗ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ದ್ವಿತಾ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ಶಿಕ್ಷಕಿ ಅಂಬಿಕಾ ಕುಂದಾಪುರ ಮತ್ತು ಕೊಂಕಣ ರೈಲ್ವೆ ಟಿ.ಟಿ ಮೋಹನ ದೇವಾಡಿಗ ಬಿಜೂರು ಇವರ ಪುತ್ರಿಯರು. ಇವರಿಗೆ ಕುಂದಾಪುರ ಅಬಾಕಸ್ ಸೆಂಟರ್ ನ ಪ್ರಸನ್ನ ಕೆ.ಬಿ, ಮಹಾಲಕ್ಷ್ಮಿ ಹಾಗೂ ದೀಪಾರವರು ತರಬೇತಿ ನೀಡಿದ್ದರು .











