ಕುಂದಾಪುರ ಮಿರರ್ ಸುದ್ದಿ…
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಸಾರಥ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿ ವಾರದ ಪರಿಸರಸ್ನೇಹಿ ಆಂದೋಲನಕ್ಕೆ 300 ನೇ ವಾರದ ಸಂಭ್ರಮ ಈ ಹಿನ್ನಲ್ಲೆಯಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ ಹಾಗೂ ವಿವಿಧ ಸಂಘಸಂಸ್ಥೆ,ಸ್ಥಳೀಯ ಶಿಕ್ಷಣ ಸಂಸ್ಥೆಗಳ ನೆರವಿನೊಂದಿಗೆ ಸಮಾಜಸೇವಕ ಆನಂದ್ ಸಿ ಕುಂದರ್ ರವರ 78ನೇ ಹುಟ್ಟುಹಬ್ಬದ ಅಂಗವಾಗಿ ಮೇ.3ರಂದು ಕೋಡಿ ಗ್ರಾಮಪಂಚಾಯತ್ ನಿಂದ ಕೋಟ ಗ್ರಾಮಪಂಚಾಯತ್ ವರೆಗಿನ ಸುಮಾರು 5ವರೆ ಕೀ.ಮೀ ಬೀಚ್ ಕ್ಲಿನಿಂಗ್ ಬೃಹತ್ ದಾಖಲೆಯ ಅಭಿಯಾನಕ್ಕೆ ಮುನ್ನುಡಿ ಬರೆಯಲಿದೆ.
ಇದರ ಅಂಗವಾಗಿ ಸೋಮವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸುವ ಪೂರ್ವಭಾವಿ ಸಭೆ ಏರ್ಪಡಿಸಲಾಯಿತು.
ಸಭೆಯಲ್ಲಿ ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ಬೀಚ್ ಕ್ಲಿನಿಂಗ್ ಅಭಿಯಾನದ ತಯಾರಿಗಳ ಕುರಿತು ಸಭೆಗೆ ಮಾಹಿತಿ ತಿಳಿಸಿದರು.
ಇದೇ ವೇಳೆ ವಿವಿಧ ಗಣ್ಯರು ಹಾಗೂ ಸಂಘಸಂಸ್ಥೆಗಳ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ಸತತ 300 ಭಾನುವಾರ ಪ್ರಕೃತಿ ಮಾತೆಗೆ ಸಮರ್ಪಿಸಿದ ಕಾರ್ಯಕ್ರಮಗಳು ಪಂಚವರ್ಣದ ಇತಿಹಾಸಕ್ಕೆ ಕಳಶಪ್ರಾಯವಾಗಿದೆ ಈ ಹಿನ್ನಲ್ಲೆಯಲ್ಲಿ ಐದುವರೆ ಕಿ.ಮೀ ಬೀಚ್ ಕ್ಲಿನಿಂಗ್ ನಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಅಭಿಯಾನ ಯಶಸ್ವಿಗೊಳಿಸಲು ಕರೆ ನೀಡಿದರು.
ಸಭೆಯಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಪಂಚವರ್ಣದ ಕಾರ್ಯವೈಕರಿ ಇಡೀ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಹಾಗೇ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಕಾರ್ಯಕ್ಕೆ ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಮಾಜಿ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಿಇಒ ಶರತ್ ಕುಮಾರ್ ಶೆಟ್ಟಿ ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ರಾಜೇಂದ್ರ ಸುವರ್ಣ,ಕೋಟ ರೈತಧ್ಚನಿ ಸಂಘದ ಅಧ್ಯಕ್ಷ. ಎಂ ಜಯರಾಮ ಶೆಟ್ಟಿ,ಐರೋಡಿ ಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ,ಜನತಾ ಸಮೂಹ ಸಂಸ್ಥೆಗಳ ಶ್ರೀನಿವಾಸ ಕುಂದರ್,ರವಿ ಕಿರಣ್ ಕೋಟ, ಪಂಚವರ್ಣ ಯುವಕಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ,ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಸಹಿತ ಹಲವು ಸಂಘ ಸಂಸ್ಥೆಗಳ. ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.












