ಗಣಿ ಇಲಾಖೆ ದಾಳಿ, ಅಕ್ರಮ ಮರಳುಗಾರಿಕೆ ನಿರತ 6 ದೋಣಿ ವಶಕ್ಕೆ

0
477

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತ್ರಾಸಿ ಗ್ರಾಮದ ಅರಮ ದೇವಸ್ಥಾನದ ಹತ್ತಿರ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 4 ದೋಣಿಗಳು ಹಾಗೂ ಬೈಂದೂರು ತಾಲೂಕಿನ ನಾಡ ಗ್ರಾಮದ ಗುಡ್ಡೆಯಂಗಡಿ ಮೇವಾಡಿ ಸೇತುವೆ ಸಮೀಪ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 2 ದೋಣಿಗಳನ್ನು ಭೂವಿಜ್ಞಾನಿ ಸಂಧ್ಯಾ ವಶಕ್ಕೆ ಪಡೆದಿರುತ್ತಾರೆ.

Click Here

ದಾಳಿ ಸಂದರ್ಭ ನಾಡ ಬಡಾಕೆರೆ ವ್ಯಾಪ್ತಿಯ ಕೆಲವು ಕಡೆ ಅನಧಿಕೃತ ಮರಳು ದಂಧೆ ನಡೆಸುವವರು ದೋಣಿಗಳನ್ನು ಹಾಗೂ ಇನ್ನಿತರ ಪರಿಕರಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿರುವುದು ಕಂಡುಬಂದಿದೆ ಎಂದು ಸಂಧ್ಯಾ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here