ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಮೇಷ ಸಂಕ್ರಮಣದ ಅಂಗವಾಗಿ ತುಲಾಭಾರ ಸೇವೆ,ದರ್ಶನ ಸೇವೆ ಕಾರ್ಯಕ್ರಮ ಜರಗಿತು. ಒಟ್ಟು 20 ಭಕ್ತರು ತುಲಾಭಾರ ಹರಕೆ ಸೇವೆಯಲ್ಲಿ ಭಾಗಿಯಾದರು.

ದೇವಳದಲ್ಲಿ ವಿಶೇಷವಾಗಿ ಅನ್ನಪ್ರಸಾದ ವಿತರಣೆ ನಡೆಯಿತು. ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ ,ಅರ್ಚಕರಾದ ಅರವಿಂದ ಜೋಗಿ, ರಮಾನಾಥ ಜೋಗಿ ಮತ್ತಿತರರು ಉಪಸ್ಥಿತರಿದ್ದರು.











