ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕನ್ನಡ ಮನಸ್ಸುಗಳು ಜಾಗೃತವಾಗಬೇಕಾಗಿದೆ. ನಮ್ಮ ಮಗು ಯಾವ ಮಾಧ್ಯಮದಲ್ಲಾದರೂ ಕಲಿಯಲಿ, ಆದರೆ ಓದಲು ಬರೆಯಲು ಕನ್ನಡವನ್ನು ಕಲಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಕುಂದಾಪುರದ ಸ.ಪ.ಪೂ.ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳು ಸರಸ್ವತಿ ಪುತ್ರರು. ಇಂಥಹ ಸರಸ್ವತಿ ಪುತ್ರರನ್ನು ಲಕ್ಷ್ಮೀಪುತ್ರರಾದ ಕನ್ನಡಿಗರು ಪುಸ್ತಕಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಪ್ರೊ| ಎ.ವಿ ನಾವಡ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿದರು. ಡಾ|ಗಾಯತ್ರಿ ನಾವಡ ಪುಸ್ತಕ ಬಿಡುಗಡೆಗೊಳಿಸಿದರು. ಸಾಹಿತಿಗಳು, ಸಂಶೋಧಕರು ಆಗಿರುವ ಡಾ.ಕಬ್ಬಿನಾಲೆ ವಸಂತ ಭರದ್ವಾಜ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಕಾಸರಗೋಡು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ವಿ.ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ., ಸಂಚಾಲಕರು, ಕುಂದಾಪುರ ತಾ.ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್, ಉಡುಪಿ ಜಿಲ್ಲಾ ಕಸಾವ ಕೋಶಾಧಿಕಾರಿ ಮನೋಹರ ಪಿ., ಸಂಘಟನಾ ಕಾರ್ಯದರ್ಶಿ ಪಿ.ವಿ ಆನಂದ, ಮೋಹನ ಉಡುಪ, ಜತೆ ಕಾರ್ಯದರ್ಶಿ, ಕುಂದಾಪುರ ತಾ.ಘಟಕದ ಗೌರವ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ, ಸಹ ಸಂಚಾಲಕರಾದ ಮಂಜುನಾಥ, ಅಕ್ಷತಾ ಗಿರೀಶ್ ಐತಾಳ್, ಬ್ರಹ್ಮಾವರ ತಾ.ಕಸಾಪ ಅಧ್ಯಕ್ಷ ಬಿ.ರಾಮಚಂದ್ರ ಐತಾಳ್, ಉಡುಪಿ ತಾ.ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ, ಕಾರ್ಕಳ ತಾ.ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಾಪು ತಾ.ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಹೆಬ್ರಿ ತಾ.ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಬೈಂದೂರು ತಾ.ಕಸಾಪ ಅಧ್ಯಕ್ಷ ಡಾ.ರಘು ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಸಾವ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ ವಡ್ಡರ್ಸೆ ವಂದಿಸಿದರು. ಕಸಾಪ ಉಡುಪಿ ಜಿಲ್ಲೆ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮುನ್ನ ಪುರಮೆರವಣಿಯಲ್ಲಿ ಸಮ್ಮೇಳನಾಧ್ಯಕ್ಷನ್ನು ಕರೆತರಲಾಯಿತು.











