ಕುಂದಾಪುರ ಮಿರರ್ ಸುದ್ದಿ…
ಕೋಟ: ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಘಸಂಸ್ಥೆಗಳ ಪಾಲು ಗಣನೀಯವಾದದ್ದು ಆ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವ ಅಗತ್ಯತೆ ಇದೆ ಎಂದು ಕೋಟ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದ್ದಾರೆ.
ಶನಿವಾರ ಕೋಟದ ಹರ್ತಟ್ಟು ಪರಿಸರದಲ್ಲಿ ನವೋದಯ ಫ್ರೆಂಡ್ಸ್ ಹರ್ತಟ್ಟು ಗಿಳಿಯಾರು ಹಮ್ಮಿಕೊಂಡ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದ ಶ್ರೀ ಅಜ್ಜಯ್ಯ ಟ್ರೋಫಿ -2022 ಉದ್ಘಾಟಿಸಿ ವಮಾತನಾಡಿ ಕ್ರೀಡೆಯ ಮೂಲಕ, ಧಾರ್ಮಿಕ ,ಶೈಕ್ಷಣಿ ಸಮಾಜಮುಖಿ ಕಾರ್ಯದಲ್ಲಿ ನಿರತರಾದ ಸಂಘಟನೆಗಳು ಅತಿ ಹೆಚ್ಚು ತಮ್ಮೂಲಕ ಎಲ್ಲರನ್ನು ಒಗ್ಗೂಡಿಸಿಕೊಂಡು ಬಾಂಧವ್ಯ ವೃದ್ಧಿಸುವ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಕುಸುಮಾಕರ ಶೆಟ್ಟಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕ ಸತೀಶ್ ಹೆಚ್ ಕುಂದರ್,ಕೃಷಿ ಕ್ಷೇತ್ರದ ಹಿರಿಯ ಸಾಧಕ ಶೀನ ದೇವಾಡಿಗರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನವೋದ ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಜಿ.ವಿ ಅಶೋಕ್ ಹೇರ್ಳೆ,ಬೆಂಗಳೂರು ಫ್ರೆಂಡ್ಸ್ ನ ರೇಣು ಗೌಡ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ವಿವೇಕ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕ ಸದಾಶಿವ ಹೊಳ್ಳ,ಕುಂದಾಪುರ ಎ.ಪಿ ಎಮ್ ಸಿ ನಿರ್ದೇಶಕ ಸಂಜೀವ ಪೂಜಾರಿ ವಂಡ್ಸೆ,ಮುಂಬೈ ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ,ಸ್ಪೋಟ್ರ್ಸ್ ಕನ್ನಡ ವೈಬ್ ಸೈಟ್ ನ ಕೋಟ ರಾಮಕೃಷ್ಣ ಆಚಾರ್ಯ, ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ, ಉದ್ಯಮಿಗಳಾದ ಶ್ಯಾಮಸುಂದರ ಭಂಡಾರಿ,ಹರೀಶ್ ದೇವಾಡಿಗ,ನವೋದ ಫ್ರೆಂಡ್ಸ್ ಗೌರವಾಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದರು. ನವೋದಯ ಫ್ರೆಂಡ್ಸ್ ಸಂಘಟಕ ಮಿಥಿಲೇಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ಕೀರ್ತಿ ಪೂಜಾರಿ ನಿರೂಪಿಸಿದರು.
ಕ್ರೀಡೆ ಬರೇ ಮನೋರಂಜನೆ ಸೀಮಿತಗೊಳಿಸದೆ ಅದನ್ನು ಬದುಕುವ ಜೀವನಾಡಿ ಕಲೆಯಾಗಿ ರೂಪಿಸಿಕೊಳ್ಳ ಆಮೂಲಕ ವಿಶ್ವಕ್ಕೆ ತನ್ನನ್ನು ತಾನು ಪರಿಚಯಿಸಿಕೊಳ್ಳವ ಕಾರ್ಯ ನಡೆಯಲಿ,ಕ್ರೀಡಾಭಿಮಾನದೊಂದಿಗೆ ಸಾಮಾಜಿಕ,ಶೈಕ್ಷಣಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒಲಪು ಅಗತ್ಯ ಎಂದು ಸನ್ಮಾನ ಸ್ವೀಕರಿಸಿದ ಸತೀಶ್ ಹೆಚ್ ಕುಂದರ್ ಅಭಿಪ್ರಾಯಪಟ್ಟರು.











