ಕೋಟ :ಬಾಳೆಕುದ್ರು ಶ್ರೀಮಠ ನೃಸಿಂಹ ಜಯಂತ್ಯುತ್ಸವ

0
582

Click Here

Click Here

ಕುಂದಾಪುರ ‌ಮಿರರ್ ಸುದ್ದಿ…

ಕೋಟ: ಬಾಳೆಕುದ್ರು ಶ್ರೀಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಸಂಪನ್ನಗೊಂಡಿತು.

Click Here

ಶ್ರೀ ಲಕ್ಷ್ಮೀನೃಸಿಂಹ ದೇವರಿಗೆ ವಿಶೇಷ ಅರ್ಚನೆ,ಮಹಾಮಂಗಳಾರತಿ ಶ್ರೀದೇವರನ್ನು ಪಲ್ಲಕ್ಕಿಯಲ್ಲಿ ಇರಿಸಿ ಶ್ರೀ ದೇವಳದ ಪ್ರಾಂಗಣದಲ್ಲಿ ಸುತ್ತಿರಿಸಿ ಪೂಜೆ ಸಲ್ಲಿಸಲಾಯಿತು.

ಶ್ರೀಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರಿಗೆ ನಾಣ್ಯದ ತುಲಾಭಾರ ಸಮರ್ಪಿಸಲಾಯಿತು. ಧಾರ್ಮಿಕ ಕೈಂಕರ್ಯದಲ್ಲಿ ಶ್ರೀಗಳು ಪಾಲ್ಗೊಂಡು ಭಕ್ತಾಧಿಗಳಿಗೆ ಮಂತ್ರಾಕ್ಷತೆ ನೀಡಿದರು.ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.

ಬಾಳಕುದ್ರು ಶ್ರೀ ಮಠದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಕಲ್ಕೂರ,ಕಾರ್ಯದರ್ಶಿ ಭುಜಂಗ ಶೆಟ್ಟಿ,ಗೌರವ ಸಲಹೆಗಾರರಾದ ಗುಜ್ಜಾಡಿ ಪ್ರಭಾಕರ್ ನಾಯಕ್,ಡಾ.ಕೆ.ಪಿ ಶೆಟ್ಟಿ,ವಿಜಯ ಕುಮಾರ್ ಶೆಟ್ಟಿ ,ಶ್ರೀಮಠದ ವ್ಯವಸ್ಥಾಪಕ ಮಂಜುನಾಥ, ಶ್ರೀ ಮಠದ ಪರಿಚಾರಕ ವಿನಯ್ ಭಟ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here