ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಜಂಬೋಸ್ಟಾರ್ ಭದ್ರತಾ ಮತ್ತು ಸೌಲಭ್ಯ ನಿರ್ವಹಣಾ ಸೇವೆಗಳು (Jumbostar Security & Facility Services Limited) ಕುಂದಾಪುರ ಶಾಖೆ ಹಳೆ ಬಸ್ ನಿಲ್ದಾಣದ ಸಮೀಪ ಎಮ್.ಜೆ. ಕಾಂಪಕ್ಸ್ ನಲ್ಲಿ ಉದ್ಘಾಟನೆಗೊಂಡಿತು.
ನೂತನ ಶಾಖಾ ಕಛೇರಿಯನ್ನು ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಉದ್ಘಾಟಿಸಿ, ಮಾತನಾಡಿ, ಜಂಬೋಸ್ಟಾರ್ ಭದ್ರತಾ ಸಂಸ್ಥೆ ಪೋಲಿಸ್ ಇಲಾಖೆ ಸಮಾನಂತರವಾಗಿ ಕೆಲವೋಂದು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೃಷ್ಟಿ ಯೋಜನೆ ಉಡುಪಿ ಜಿಲ್ಲೆಯಲ್ಲಿ ಯಶ್ವಸಿಯಾಗಿದೆ. ಇಲಾಖೆಗಳ ಜತೆಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದರು. ಮಂಗಳೂರು, ಉಡುಪಿಯಲ್ಲಿ ಜಂಬೋಸ್ಟಾರ್ ಭದ್ರತಾ ಸಂಸ್ಥೆ ಯಶ್ವಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕುಂದಾಪುರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದವರು ಹಾರೈಸಿದರು.
ಉದ್ಯಮಿ ಅಭಿನಂದನ್ ಶೆಟ್ಟಿ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್., ಕುಂದಾಪುರ ಕಾರ್ಮಿಕ ನಿರೀಕ್ಷಕರು ವಿಜೇಂದ್ರ ಕೆ. ಉಪಸ್ಥಿತರಿದ್ದರು.
ಜಂಬೋಸ್ಟಾರ್ ಭದ್ರತಾ ಮತ್ತು ಸೌಲಭ್ಯ ನಿರ್ವಹಣಾ ಸೇವೆಗಳು ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು.












