ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ ಜಾರಿ ಮಾಡಲು ಆದೇಶ ಹೊರಡಿಸಿರುವುದನ್ನು ಖಂಡಿಸಿ ದೇಶವ್ಯಾಪಿ ಸಿಐಟಿಯು ಕರೆಯನ್ನು ಇಂದು ಬೈಂದೂರು ಪೇಟೆಯಲ್ಲಿ ಆದೇಶ ಪ್ರತಿ ದಹಿಸಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ ಜಾರಿ ಮಾಡುವುದರ ಮೂಲಕ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುತ್ತಿದೆ. 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್ ಗಳನ್ನು ಮಾಡಿ ದುರ್ಬಲಗೊಳಿಸಲಾಗಿದೆ ಇದು ಎಲ್ಲಾ ಕ್ಷೇತ್ರಗಳ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ತೊಂಡೆ ಮಕ್ಕಿ ಮಾತನಾಡಿ ನೂತನ ಲೇಬರ್ ಕೋಡ್ ನಿಂದ ಕಟ್ಟಡ ಕಾರ್ಮಿಕರ ಸೆಸ್ ಹಾಗೂ ಕಲ್ಯಾಣ ಮಂಡಳಿ ರದ್ದಾಗುತ್ತದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಜಾರಿ ಮಾಡಬಾರದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶೀಲಾವತಿ, ಗೋಪಾಲಕೃಷ್ಣ ದೇವಾಡಿಗ, ಮರಲ, ಅಣ್ಣಪ್ಪ, ನಾಗರತ್ನ ಪಡುವರಿ, ಮಂಜು ಪೂಜಾರಿ ಪಡುವರಿ, ಶೋಭಾ ಕೆರೆಮನೆ,ಮೊದಲಾದವರಿದ್ದರು.
ಕೇಂದ್ರ ಸರ್ಕಾರದ ಆದೇಶ ಪ್ರತಿಯನ್ನು ದಹಿಸಲಾಯಿತು.












