ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗ ಸರ್ವೇ ನಂಬರ್ 141: 1ಸಿ 1ಎ ನೇ ಪ್ರದೇಶದಲ್ಲಿ ಈಗಾಗಲೇ ಲಗೇಜ್ ಟೆಂಪೋ ನಿಲ್ದಾಣವಾಗಿ ಬಳಕೆ ಆಗುತ್ತಿದೆ. ಈ ಜಾಗವನ್ನು ಈ ಹಿಂದೆಯೂ ರಾಜಕೀಯ ಪಕ್ಷಗಳಿಗೆ ನೀಡುವ ಪ್ರಸ್ತಾವನೆ ಇದ್ದು ಈ ಬಗ್ಗೆ ಆಕ್ಷೇಪ ಬಂದಿರುತ್ತದೆ. ಆಕ್ಷೇಪದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರ ವರದಿಯಂತೆ (ವರದಿ ಲಗತ್ತಿಸಲಾಗಿದೆ) ಈ ಪ್ರದೇಶವು ಪೊರಂಬೋಕು ರಸ್ತೆ ತೋಡು ಆಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಮಂಜೂರಾತಿಗೆ ಅವಕಾಶ ಇಲ್ಲ ಎಂಬುದಾಗಿ ವರದಿ ನೀಡಿರುತ್ತಾರೆ. ಈ ಹಿಂದೆಯೂ ಈ ಜಾಗವನ್ನು ಲಗ್ಗೇಜು ಆಟೋ ನಿಲ್ದಾಣವಾಗಿ ಗುರುತಿಸಲು ಪುರಸಭೆ 2000 ನೇ ಇಸವಿಯಲ್ಲಿ ಜಿಲ್ಲಾಧಿಕಾರಿ ಒಪ್ಪಿಗೆಗೆ ಸಲ್ಲಿಸಲಾಗಿತ್ತು. ಸಾರ್ವಜನಿಕ ಉಪಯೋಗಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸ್ಥಳ ಇಲ್ಲದಿರುವಾಗ ಇರುವ ಜಾಗವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಕುಂದಾಪುರ ತಾಲೂಕು ಸಮಿತಿಯ ಅಕ್ಷೇಪ ಇದೆ. 2000 ಇಸವಿಯ ಪುರಸಭೆ ತೀರ್ಮಾನದಂತೆ ಲಗೇಜ್ ಆಟೋ ಟೆಂಪೋ ನಿಲ್ದಾಣವಾಗಿಯೇ ಕಾದಿರಿಸಲು ಪಕ್ಷ ಒತ್ತಾಯಿಸುತ್ತದೆ
ಪುರಸಭೆಯ ಮಾನ್ಯ ಆಡಳಿತ ಅಧಿಕಾರಿಯವರು ತೀರ್ಮಾನವನ್ನು ಮರು ಪರಿಶೀಲಿಸಿ ಸ್ಥಳವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಿಸಬೇಕಾಗಿ ಪಕ್ಷ ಒತ್ತಾಯಿಸಿದೆ
ನಿಯೋಗದಲ್ಲಿ ಸಿಪಿಐಎಂ ಹಿರಿಯ ಮುಖಂಡರು, ಮಾಜಿ ಪುರಸಭಾ ಅಧ್ಯಕ್ಷರು ಆದ ವಿ ನರಸಿಂಹ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗರ, ಜಿಲ್ಲಾ ಮುಖಂಡರಾದ H ನರಸಿಂಹ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ಉಪಸ್ಥಿತರಿದ್ದರು












