ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೇಂದ್ರ ಸರ್ಕಾರ 4 ಶ್ರಮ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರಕಾರಗಳು ಜಾರಿಗೆ ತರುವಂತೆ ಒತ್ತಾಯಿಸುವುದನ್ನು ಸಿಐಟಿಯು ಕುಂದಾಪುರ ಸಂಚಾಲನ ಸಮಿತಿ ವಿರೋಧಿಸಿದೆ.
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಶ್ರಮ ಸಂಹಿತೆಯ ಅಧಿಸೂಚನೆಯ ಕರಡು ಪ್ರತಿ ದಹಿಸುವುದರ ಮುಖಾಂತರ ಪ್ರತಿಭಟಿಸಿದರು.
ಪ್ರತಿಭಟನೆ ನಿರತರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಇಡೀ ದೇಶದಾದ್ಯಂತ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿದ್ದರು ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಹೊಸ ಶ್ರಮ ಸಂಹಿತೆಯನ್ನು ಜಾರಿಗೆ ತರುತ್ತಿದೆ. ಈ ನಿಲುವನ್ನು ಸಿಐಟಿಯು(CITU) ಖಂಡಿಸುವುದಾಗಿ ಹೇಳಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಹೆಚ್. ನರಸಿಂಹ, ಮಹಾಬಲ ವಡೇರ ಹೋಬಳಿ, ಕಟ್ಟಡ ಸಂಘದ ಮುಖಂಡರಾದ ಶಶಿಕಾಂತ್, ಸುಧೀರ್, ರಾಜ btr, ರೆಹಮಾನ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ವಹಿಸಿದ್ದರು.












