ಕುಂದಾಪುರದ ಗುಡ್ಡೆಅಂಗಡಿಯಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ

0
563

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ, ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿಯ ಗುಡ್ಡೆಂಗಡಿಯಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮೇ 25ರಂದು ಶುಭಾರಂಭಗೊಳ್ಳಲಿದೆ. ಒಂದು ವರ್ಷ ಅವಧಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ ಮತ್ತು ವೆಲ್ಡಿಂಗ್, ಮೆಕ್ಯಾನಿಕ್-ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಂಗ್ ತಾಂತ್ರಿಕ ಕೋರ್ಸುಗಳು ಹಾಗೂ ಮಹಿಳೆಯರಿಗೆ ಫ್ಯಾಶನ್ ಡಿಸೈನಿಂಗ್ ಕೋರ್ಸುಗಳಿಗೆ ಪ್ರವೇಶಾತಿ ಆರಂಭವಾಗಿದೆ ಎಂದು ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮುಖ್ಯಸ್ಥರಾದ ಡಾ. ಜಿ. ರಾಮಕೃಷ್ಣ ಆಚಾರ್ ತಿಳಿಸಿದರು.
ಅವರು ಸೋಮವಾರ ಗುಡ್ಡೆಅಂಗಡಿಯ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಈ ಕೇಂದ್ರವನ್ನು ಡಾ.ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ Sಏಈ ಇಟixeಡಿ Iಟಿಜiಚಿ Pvಣ. ಮೂಡಬಿದ್ರಿ ಸಂಯುಕ್ತವಾಗಿ ಸ್ಥಾಪಿಸಿ ನಿರ್ವಹಿಸಲಿವೆ ಎಂದರು.
ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳನ್ನು ಮನಗಂಡು, ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ಇದರ ಪ್ರಮುಖ ಗುರಿಯಾಗಿದೆ. ಕೈಗಾರಿಕಾ ತರಬೇತಿಯ ಜೊತೆಗೆ ಸೃಜನಾತ್ಮಕ ವೃತ್ತಿಜೀವನಕ್ಕೂ ಅವಕಾಶ ನೀಡಲಾಗುತ್ತಿದೆ. ಎ.ಐ ಮತ್ತು ಆಟೋಮೇಶನ್ ಯುಗದಲ್ಲಿ ಕೈಗಾರಿಕೆಗಳು ಪದವೀಧರರಿಗಿಂತ ಕೌಶಲ್ಯ ಹೊಂದಿದ ಪರಿಣಿತರನ್ನು ಹೆಚ್ಚಿನ ಪ್ರಮಾಣದಲ್ಲಿ ಹುಡುಕುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಉದ್ಯೋಗಾಧಾರಿತ ಪ್ರಮಾಣಪತ್ರ ಕೋರ್ಸ್‍ಗಳನ್ನು ಪ್ರಾರಂಭಿಸಿದೆ. ಇಲ್ಲಿ ತರಬೇತಿ ಪಡೆದವರು ದೇಶ ಹಾಗೂ ವಿದೇಶಗಳಲ್ಲಿ ಕೆಲಸ ಮಾಡುವ ಕೌಶಲ್ಯ ಹಾಗೂ ಆರ್ಹತೆ ಪಡೆಯಲಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಮೂಡಬಿದ್ರೆಯಲ್ಲಿ ಎಸ್.ಕೆ.ಎಪ್ ನಲ್ಲಿ ಮೂರು ತಿಂಗಳ ಇಂಟರ್ನಶಿಫ್‍ಗೆ ಆವಕಾಶ ನೀಡಲಾಗುತ್ತದೆ. ಅವರ ಪ್ರಾವಿಣ್ಯತೆಯ ಮೇಲೆ ಉದ್ಯೋಗವಕಾಶವನ್ನು ನೀಡಲಾಗುವುದು ಎಂದರು.
ಈಗಾಗಲೇ ಕೌಶಲ್ಯಾಧರಿತ ತರಬೇತಿ ಪಡೆದವರಿಗೆ ವ್ಯಾಪಕ ಬೇಡಿಕೆ ಇದೆ. ಇನ್ನೂ ಕೆಲವೇ ವರ್ಷಗಳನ್ನು ವ್ಯಾಪಕವಾಗಿ ಹೆಚ್ಚಳವಾಗಲಿದೆ. ವೃತ್ತಿ ಕೌಶಲ್ಯ ಉಳ್ಳವರಿಗೆ ಬೇರೆ ಬೇರೆ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪಾಸ್., ಅಥವಾ ಪೇಲ್ ಯಾವುದೇ ವಿದ್ಯಾಭ್ಯಾಸ ಹೊಂದಿರುವವರು ಈ ತರಬೇತಿ ಪಡೆಯಬಹುದು ಎಂದರು.
ಸಂಸ್ಥೆಯ ತಾಂತ್ರಿಕ ಸಲಹೆಗಾರರಾದ ಬಾಲಕೃಷ್ಣ ಅವರು ಮಾತನಾಡಿ, ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿ (ಐ.ಟಿ.ಇ.ಎಸ್) ಮುಂಬಯಿ ಇದರ ಮಾನ್ಯತೆ ಇರುವ
ಮಾನ್ಯತೆ ಇರುವ ಈ ಕೋರ್ಸ್‍ಗೆ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿತೆ ಉಳ್ಳವರು ಸರಕಾರ ಸೂಚಿಸಿದ ವಯೋಮಿತಿಯ ಮಾನದಂಡದಲ್ಲಿ ಅರ್ಜಿ ಸಲ್ಲಿಸಬಹುದು. ತರಬೇತಿಯು ತತ್ವಾಧಾರಿತ ಹಾಗೂ ಪ್ರಾಯೋಗಿಕ, ನೈಜ ಕೈಗಾರಿಕಾ ವಾತಾವರಣದಲ್ಲಿ ಕಲಿಕೆ, ಪ್ರತಿ ಬ್ಯಾಚ್‍ಗೆ 20 ವಿದ್ಯಾರ್ಥಿಗಳ ಮಿತಿ, ವೈಯಕ್ತಿಕ ಮಾರ್ಗದರ್ಶನ, ಅನುಭವಿ ಶಿಕ್ಷಕರಿಂದ ತರಬೇತಿ, ಇಂಟರ್ನ್‍ಶಿಪ್ ಮತ್ತು ಕೈಗಾರಿಕಾ ಅನುಭವ ನೀಡಲಾಗುವುದು. ಉತ್ಪಾದನಾ ವಿಧಾನ, ಗುಣಮಟ್ಟ ಪರಿಶೀಲನೆ ಮತ್ತು ಪ್ರಾಜೆಕ್ಟ್ ಅನುಭವ ಪಡೆಯುವ ಅವಕಾಶವೂ ಇರುತ್ತದೆ ಎಂದರು.
ತರಬೇತಿ ಪಡೆದವರಿಗೆ ಉದ್ಯೋಗ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗುವುದು. ಭಾರತಾದ್ಯಂತ ಅಲ್ಲದೆ ವಿದೇಶಿ ಉದ್ಯೋಗಾವಕಾಶಗಳ ಮಾಹಿತಿ ನೀಡಲಾಗುವುದು. ಕೈಗಾರಿಕಾ ಒಪ್ಪಂದ ಮಾರ್ಗದರ್ಶನದಂತೆ ಆಸ್ಟ್ರೇಲಿಯಾ ಸೇರಿ ಬೇರೆ ಬೇರೆ ದೇಶಗಳಲ್ಲಿ ಉದ್ಯೋಗವಕಾಶಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ. ಮಾತ್ರವಲ್ಲದೆ ತರಬೇತಿ ಪಡೆದವರು ಕಡಿಮೆ ಹೂಡಿಕೆಯಲ್ಲಿ ಸ್ವ ಉದ್ಯೋಗ ಆರಂಭಿಸ ಬಹುದು. ಮನೆಯಿಂದಲೇ ಕೆಲಸ ಮಾಡಬಹುದು. ಬ್ಯಾಂಕ್ ಸಾಲ ಸೌಲಭ್ಯಗಳ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಫ್ಯಾಷನ್ ಡಿಸೈನಿಂಗ್ ಕಲಿಯುವ ಮಹಿಳೆಯರಿಗೆ ಸ್ಕಿಲ್ಡ್ ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್, ಉಡುಪು ತಯಾರಿಕೆ ಮತ್ತು ಪ್ಯಾಟರ್ನ್ ಮೇಕಿಂಗ್, ಟೆಕ್ಸ್ಟೈಲ್ ಬಟ್ಟೆಗಳ ಮೂಲ ಮಾಹಿತಿ, ಹ್ಯಾಂಡ್ ಮತ್ತು ಮಷಿನ್ ಎಂಬ್ರಾಯ್ಡರಿ, ಫ್ಯಾಷನ್ ಇಲಸ್ಟ್ರೇಷನ್, ಡ್ರೇಪಿಂಗ್ ತಂತ್ರಗಳು, ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಕಲಿಸಲಾಗುವುದು ಎಂದರು.
ಫ್ಯಾಶನ್ ಡಿಸೈನ್ ಕಲಿತ ಮಹಿಳೆಯರು ಬೂಟಿಕ್ ಮತ್ತು ಫ್ಯಾಷನ್ ಸ್ಟುಡಿಯೋಗಳು, ಗಾರ್ಮೆಂಟ್ ತಯಾರಿಕಾ ಸಂಸ್ಥೆಗಳು, ಟೈಲರಿಂಗ್ ಮತ್ತು ಅಲ್ಟರೇಷನ್ ಕೇಂದ್ರಗಳು, ರಿಟೇಲ್ ಮತ್ತು ಫ್ಯಾಷನ್ ಮಳಿಗೆ ಸ್ಥಾಪಿಸಬಹುದು. ಸ್ವಂತ ಬೂಟಿಕ್ ಆರಂಭಿಸಬಹುದು, ಮನೆಯಿಂದಲೇ ಟೈಲರಿಂಗ್ ಕೆಲಸ ಆರಂಭಿಸಬಹುದು, ಬ್ಲೌಸ್, ಯೂನಿಫಾರ್ಮ್ ಹಾಗೂ ಡಿಸೈನರ್ ಉಡುಪುಗಳ ಕಸ್ಟಮ್ ಆರ್ಡರ್ ಪಡೆಯಬಹುದು, ಆನ್‍ಲೈನ್ ಫ್ಯಾಷನ್ ವೇದಿಕೆಗಳೊಂದಿಗೆ ಕೆಲಸ ಮಾಡುವ ಅವಕಾಶವಿದೆ ಎಂದರು.
ವಿಶ್ರಾಂತ ಪ್ರಾಂಶುಪಾಲರು, ಸಂಸ್ಥೆಯ ಸಲಹೆಗಾರರಾದ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಖ್ಯಾತ ಉದ್ಯಮಿ ಡಾ.ಜಿ. ರಾಮಕೃಷ್ಣ ಆಚಾರ್ ಅವರು ಗುಡ್ಡೆಅಂಗಡಿಯಲ್ಲಿ ಹುಟ್ಟಿ ಬೆಳೆದವರು. ತಮ್ಮ ಪರಿಶ್ರಮ, ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ಅನುಭವದ ಮೂಲಕ ಜಾಗತಿಕ ಮಟ್ಟದ ಉದ್ಯಮಗಳನ್ನು ನಿರ್ಮಿಸಿರುವ ಅವರ ಜೀವನಯಾತ್ರೆಯೇ ಈ ಕೇಂದ್ರದ ಪ್ರೇರಣೆಯಾಗಿದೆ. ಅವರು ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ನೀಡಿದ್ದಾರೆ. ತನ್ನ ಊರಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ ಮಾಡಿದ್ದಾರೆ. ಇದರ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಬೇಕು ಎಂದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್
ಗುಡ್ಡೆಅಂಗಡಿ, ಯಡ್ಯಾಡಿ-ಮತ್ಯಾಡಿ ಪೆÇೀಸ್ಟ್,
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576222
ಮೊಬೈಲ್: 9187492550

Click Here

LEAVE A REPLY

Please enter your comment!
Please enter your name here