ಕುಂದಾಪುರ :ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವ್ಯವಸ್ಥಾಪಕರಾದ ಕೃಷ್ಣ ಅವರಿಗೆ ಪೊಲೀಸ್ ಇಲಾಖೆಯ ಪ್ರಶಂಸನಾ ಪತ್ರ

0
22

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರ ಅಂಕದಕಟ್ಟೆ ಸಮೀಪದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಮಾಜಮುಖಿ ಕಾರ್ಯವೈಖರಿಯನ್ನು ಗಮನಿಸಿ ಪೊಲೀಸ್ ಇಲಾಖೆಯು ಸಂಸ್ಥೆಯ ವ್ಯವಸ್ಥಾಪಕ ಕೃಷ್ಣ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

2026ರ ಏ.20 ಪೊಲೀಸ್ ಠಾಣೆ ಸರಹದ್ದಿನ ಆಜ್ರಿ ಗ್ರಾಮದ ತಗ್ಗುಂಜೆ ಉಮಾಮಹೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Click Here

ಈ ಘಟನೆಗೆ ಸಂಬಂಧಪಟ್ಟಂತೆ ಈ ದೇವಳದಲ್ಲಿ ಈಗಾಗಲೇ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅಳವಡಿಸಲಾಗಿದ್ದ ಲೈವ್ ರೆಕಾರ್ಡಿಂಗ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ಚಹರೆಯನ್ನು ಆಧರಿಸಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ ಆರೋಪಿತರಿಂದ ಕಾಣಿಕೆ ಹುಂಡಿ ಹಾಗೂ ಅದರಲ್ಲಿದ್ದ ಹಣವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದರು.

ಅವರು ನೀಡಿದ ಉಪಯುಕ್ತ ಮಾಹಿತಿಯಿಂದ ಈ ಪ್ರಕರಣವನ್ನು ಭೇದಿಸಲು ಸಹಕಾರಿಯಾಗಿತ್ತು. ಈ ಕುರಿತಂತೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಮಯ ಪ್ರಜ್ಞೆಯಿಂದ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವ್ಯವಸ್ಥಾಪಕರಾದ ಕೃಷ್ಣ ಅವರಿಗೆ ಕುಂದಾಪುರದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

Click Here

LEAVE A REPLY

Please enter your comment!
Please enter your name here