ಗೋಳಿಹೊಳೆ : ರಾಜ್ಯದ ಏಕೈಕ ಬಿಳಿಶಿಲೆ ಗಣಪತಿ ದೇವಸ್ಥಾನದಲ್ಲಿ ಗಣೇಶೊತ್ಸವದ ಸಂಭ್ರಮ

0
450

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಶುದ್ಧ ಮನಸ್ಸಿನ, ಸಂಕಲ್ಪ ಪಾರ್ಥನೆಯ ರೂಪದಲ್ಲಿ ಶ್ರೀ ದೇವರ ಸಾನಿಧ್ಯದಲ್ಲಿ ಪ್ರಾರ್ಥಿಸಿದರೆ ಭಕ್ತರ ಮನೋಕಾಂಕ್ಷೆ ಈಡೇರುತ್ತದೆ. ನೆನೆದ ಕಾರ್ಯ ಸಿದ್ದಿಯಾಗುತ್ತದೆ. ವಿಜಯೀ ಗಣಪತಿ ಎನ್ನುವ ಖ್ಯಾತಿಗೆ ಪಾತ್ರವಾದ ದೇವಸ್ಥಾನ ಕುಂದಾಪುರ ತಾಲೂಕು ಗೋಳಿಹೊಳೆಯ ಬೆಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಬುಧವಾರ ಗಣೇಶೋತ್ಸವ ಸಂಭ್ರಮದಿಂದ ನಡೆಯಿತು.

Video:-

Click Here

ರಾಜ್ಯದಲ್ಲಿರುವ ಏಕೈಕ ಬಿಳಿಶಿಲೆ ದೇವಸ್ಥಾನ : ಹೆಸರೇ ಸೂಚಿಸುವಂತೆ ಇಲ್ಲಿನ ಗಣಪತಿ ವಿಗ್ರಹ ಶುದ್ಧ ಬಿಳಿಶಿಲೆ ಅಥವಾ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು, ಆಕರ್ಷಣೀಯವಾಗಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ದೇವಸ್ಥಾನ ಗಣಪತಿಯ ಕಾರಣಿಕ ಪ್ರಸಿದ್ದಿಯಿಂದಲೇ ಭಕ್ತ ಸಂದೋಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕುಂದಾಪುರ ತಾಲೂಕಿನ ಒಂದು ಮೂಲೆಯಲ್ಲಿರುವ ಗೋಳಿಹೊಳೆ ಗಾಮ ಹಲವಾರು ಭೌತಿಕ ವಿಶೇಷಗಳನ್ನು ಒಳಗೊಂಡ ಊರು, ಅವುಗಳಲ್ಲಿ ಮುಖ್ಯವಾದುದು ಈ ಬಿಳಿ ಶಿಲೆಯ ವಿನಾಯಕ ದೇವಸ್ಥಾನ. ಋಷಿಮುನಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಕಾರ್ಯ ವಿಜಯದ ಸಂಕೇತ. ಭಕ್ತರ ಮನೋಸಂಕಲ್ಪಗಳಿಗೆ ಕ್ಷೇತ್ರದಿಂದ ವಿಜಯತ್ವ ದೊರಕುತ್ತದೆ ಎನ್ನುವ ಪ್ರತೀತಿ ಭಕ್ತವಲಯದಲ್ಲಿ ದಟ್ಟವಾಗಿದೆ – ಶಿವರಾಜ್ ಪೂಜಾರಿ

ಗತಕಾಲದಲ್ಲಿ ಋಷಿಮುನಿಗಳು ಬಿಳಿಶಿಲೆ ಗಣಪತಿ ವಿಗ್ರಹವನ್ನು ಪೂಜಿಸುತ್ತಿದ್ದರು. ನಂತರ ರಾಜವಂಶಸ್ಥರು ಈ ಬಿಳಿಶಿಲೆ ಗಣಪತಿಯನ್ನು ಆರಾಧಿಸಲು ಆರಂಭಿಸಿದರು ನಂತರ ಬ್ರಿಟಿಷರಿಂದಲೂ ಮುಂದುವರೆದು ಈಗ ಜೀರ್ಣೋದ್ಧಾರವಾಗಿ ಗ್ರಾಮದ ಕಾರಣೀಕ ಕ್ಷೇತ್ರವಾಗಿದೆ. ಇಲ್ಲಿ ಪ್ರತೀ ವರ್ಷ ಗಣೇಶೋತ್ಸವ ಹಾಗೂ ನವರಾತ್ರಿ ಉತ್ಸವಗಳು ಸಂಭ್ರಮದಿಂದ ನಡೆಯುತ್ತವೆ – ಅರ್ಚಕ ವಾಸುದೇವ ಹೊಳ್ಳ

Click Here

LEAVE A REPLY

Please enter your comment!
Please enter your name here