ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ಭಾರತೀಯ ಜನತಾ ಪಕ್ಷವೂ ಕೂಡಾ ಸೇವಾ ಚಟುವಟಿಕೆಗಳ ಮೂಲಕ ಜನರಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ತನಕ ಸೇವಾ ಪಾಕ್ಷಿಕ ಅಭಿಯಾನವನ್ನು ನಡೆಸಲಿದೆ ಎಂದು ಸೇವಾ ಪಾಕ್ಷಿಕ ಅಭಿಯಾನದ ವಕ್ತಾರ ರಾಘವೇಂದ್ರ ಕಿಣಿ ತಿಳಿಸಿದರು.
ಅವರು ಗುರುವಾರ ಕುಂದಾಪುರದ ಬಿಜೆಪಿ ಮಂಡಲ ಕಛೇರಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಸೆ.25 ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ, ಅ.2 ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಕ್ಕೆ ಪೂರಕವಾ ಸೆ.17 ಮತ್ತು 18ರಂದು ರಕ್ತದಾನ ಶಿಬಿರ 80 ಕಡೆಗಳಲ್ಲಿ ನಡೆಯಲಿದೆ. ಸೆ.17ರಿಂದ ಅ.2 ಜೀವರಕ್ಷಕ ಅಭಿಯಾನ, ಸೆ.20-21 ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಪ್ರದರ್ಶಿನಿ, ಸೆ.21-22 ಆರೋಗ್ಯ ತಪಾಸಣಾ ಶಿಬಿರ, ಸೆ.22-23 ಅರಳಿ ಗಿಡ ನೆಡುವ ಅಭಿಯಾನ, ಸೆ.24-25 ಕಮಲೋತ್ಸವ, ಸೆ.25-29 ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ, ಸೆ.26-27 ಅಮೃತ ಸರೋವರ ನಿರ್ಮಾಣ, ಸೆ.28-29 ಅಂಗನವಾಡಿ ಸೇವಾ ದಿವಸ್, ಸೆ.30 ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ, ಅ.2ರಂದು ಸ್ವಚ್ಛತಾ ಅಭಿಯಾನ, ಮತ್ತು ಖಾದಿ ಉತ್ಸವ ನಡೆಯಲಿದೆ ಎಂದರು.
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಮಾತನಾಡಿ, ಸೆ.17ರಂದು ಕುಂದಾಪುರ ಮಂಡಲದ ವತಿಯಿಂದ ರೆಡ್‍ಕ್ರಾಸ್ ಕುಂದಾಪುರ ಸಹಕಾರದಲ್ಲಿ ರಕ್ತದಾನ ಶಿಬಿರ, ಸೆ.20ರಂದು ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ದತ್ತು ಸ್ವೀಕಾರ ಕಾರ್ಯಕ್ರಮ, ಸೆ.22ರಂದು ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಚಿಕನ್‍ಸಾಲ್ ಸ.ಪ್ರಾ.ಶಾಲಾ ವಠಾರದಲ್ಲಿ ಅರಳಿ ಗಿಡ ನೆಡುವ ಕಾರ್ಯಕ್ರಮ, ಸೆ.24ರಂದು ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆ ಸ್ವಚ್ಛತಾ ಕಾರ್ಯಕ್ರಮ, ಸೆ.25ರಂದು ಎಸ್.ಟಿ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕುಂದಾಪುರ ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸೆ.30ರಂದು ಎಸ್.ಸಿ ಮೋರ್ಚಾ ವತಿಯಿಂದ ಆರೋಗ್ಯ ತಪಾಸಣೆ ಹಾಗೂ ಅಭಾ ಕಾರ್ಡ್ ನೊಂದಣಿ ಕಾರ್ಯಕ್ರಮ, ಅ.2ರಂದು ಕುಂದಾಪುರ ವಿಧಾನಸಭಾ ಕ್ಷೇತ್ರದ 222 ಬೂತ್‍ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಅಭಿಯಾನದ ಶಿವಕುಮಾರ್, ಪ್ರತಾಪಚಂದ್ರ ಚೇರ್ಕಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಕುಂದಾಪುರ ಮಂಡಲದ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಮಾಧ್ಯಮ ಸಂಚಾಲಕ ಅಭಿಷೇಕ್, ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.











