ಕುಂದಾಪುರ ಮಿರರ್ ಸುದ್ದಿ…
ಕೋಟ: ದೇಶದ ಗಡಿ ಕಾಯುವ ಯೋಧರಷ್ಟೆ ಪೌರಕಾರ್ಮಿಕರು ಸ್ವಚ್ಚತೆಯ ಮೂಲಕ ರಾಷ್ಟ್ರವನ್ನು ಕಾಯುತ್ತಿದ್ದಾರೆ ಎಂದು ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಎಸ್ ಸುಲತಾ ಹೆಗ್ಡೆ ಹೇಳಿದ್ದಾರೆ.

ಶುಕ್ರವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪಟ್ಟಣಪಂಚಾಯತ್ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ ಪೌರ ಕಾರ್ಮಿಕರ ಬಗ್ಗೆ ಕಿಳರಿಮೆ ಸಲ್ಲ, ಬದಲಾಗಿ ಅವರನ್ನು ಸಮಾಜ ಗೌರಯುತವಾಗಿ ನಡೆಸಿಕೊಳ್ಳುವುದರ ಮೂಲಕ ಘನತೆಯನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕಿದೆ.
ದೇಶದ ಪ್ರಧಾನಿ ನರೇಮದ್ರ ಮೋದಿ ಪೌರಕಾರ್ಮಿಕರ ಬಗ್ಗೆ ಅಪಾರ ಕಾಳಜಿ ವಹಿಸಿ ತಾನು ಅವರ ಜೊತೆ ಧ್ವನಿಯಾಗಿದ್ದಾರೆ, ಪೌರಕಾರ್ಮಿಕರ ಉತ್ಸಾಹ ಹೆಚ್ಚಿಸುವ ಜೊತೆಗೆ ಅವರಲ್ಲಿ ನಾವಾಗಿ ಕಾಣುವ ದೃಷ್ಠಿ ಬೆಳೆಸಿಕೊಳ್ಳಬೇಕು,ಅವರ ಧ್ಯೇಯ ನಿಷ್ಠೆ ಸಮಾಜಕ್ಕೆ ಹೊಸ ದೃಷ್ಠಿಕೋನ ಆಯಾಮ ದೊರಕುತ್ತಿದೆ ಈ ದಿಸೆಯಲ್ಲಿ ಸರಕಾರ ಅವರ ಶ್ರೇಯಾಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪಟ್ಟಣಪಂಚಾಯತ್ ಮುಖ್ಯಾಧಿಕಾರಿಗಳು ಶಿವ ನಾಯ್ಕ, ಪಟ್ಟಣಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ, ಪ.ಪಂ ಸದಸ್ಯರಾದ ರವೀಂದ್ರ ಕಾಮತ್,ಕರುಣಾಕರ ಪೂಜಾರಿ,ಹಿರಿಯ ಪೌರಕಾರ್ಮಿಕರಾದ ಸುಗುಣ, ಪ್ರದೀಪ , ಪಟ್ಟಣಪಂಚಾಯತ್ ನಾಮನಿರ್ದೇಶಿತ ಸದಸ್ಯ ದೇವೇಂದ್ರ ದೇವಾಡಿಗ ಉಪಸ್ಥಿತರಿದ್ದರು
ನಂತರ ಪೌರಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.











