ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂತಾನಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ದೇವಿ ಎಂಬ ಪ್ರತೀತಿ ಪಡೆದಿರುವ ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ದೇವಳದಲ್ಲಿ ಶರನ್ನವರಾತ್ರಿಯ ಸಂಭ್ರಮ.
ಆ ಪ್ರಯುಕ್ತ ಸೆ.26ರಿಂದ ಆರಂಭಿಸಿ ಅ.5ರ ವಿಜಯದಶಮಿ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೆರಲಿದೆ.
ವಿಜಯದಶಮಿಯ ವರೆಗೆ ದಿನಂಪ್ರತಿ ದೇವಿಗೆ ನಾನಾ ಬಗೆಯ ನಾನಾ ರೀತಿಯ ಅವತಾರಗಳ ಸರ್ವಾಲಂಕಾರ ನಡೆಯಲಿದ್ದು ,ಪ್ರತಿದಿನ ಚಂಡಿಕಾ ಸಪ್ತಸತಿ ಪಾರಾಯಣ, ದುರ್ಗಾಹೋಮ, ಅನ್ನಸಂತರ್ಪಣೆ, ವಿವಿಧ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಎಂದು ದೇವಳದ ಅಡಳಿತ ಮಂಡಳಿ ತಿಳಿಸಿದೆ.











