ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ :ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ-ಹಾಗೂ ಕೈಂಡ್ ಹಾರ್ಟ್ಸ್ ಟ್ರಸ್ಟ್, ಇದರ ವತಿಯಿಂದ ಗುಂಡ್ಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುರ್ಚಿ, ಪೀಠೋಪಕರಣ ಹಾಗೂ ಧ್ವನಿವರ್ಧಕ ಪೆಟ್ಟಿಗೆ (ಸ್ಪೀಕರ್) ಹಸ್ತಾಂತರಿಸಲಾಯಿತು.
Video:-

ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಮೊನೋಜ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಂಡ್ಮಿಯ ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ರೋಟರಿ ಕ್ಲಬ್ ಸಹಕಾರ ಸದಾ ಇರುತ್ತದೆ ಎಂದರು.
ಕೈಂಡ್ ಹಾರ್ಟ್ಸ್ ಟ್ರಸ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಅವರು ಮಾತನಾಡಿ ಸಮಾಜಕ್ಕೊಂದು ಸೇವೆಯನ್ನು ನೀಡಬೇಕು ಎನ್ನುವ ಅಭಿಲಾಸೆಯಿಂದ ಶಿಕ್ಷಣ ಸಂಸ್ಥೆಗೆ ಈ ಕೊಡುಗೆ ನೀಡುತ್ತಿದ್ದೇವೆ. ಇದು ಸಾರ್ಥಕವಾಗುತ್ತದೆ ಎನ್ನುವ ಆಶಯ ನಮ್ಮದು. ಇಂದಿನ ಮಕ್ಕಳು ಕೂಡಾ ಒಳ್ಳೆಯ ಶಿಕ್ಷಣ ಪಡೆದು ಮಾದರಿಯಾಗಿ ಮೂಡಿಬರಬೇಕು ಎನ್ನುವುದು ನಮ್ಮ ಆಶಯವಾಗಿದೆ. ಸೇವಾ ಅಭಿಲಾಸೆಯಿಂದ ಈ ಸಣ್ಣ ಕೊಡುಗೆಯನ್ನು ನೀಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಮಲ್ಲಿಕಾ ಕೆ. ಆಚಾರ್ಯ, ಐಟಿ ಸರ್ವಿಸ್ ನಿರ್ದೇಶಕ ಮುರುಳೀಧರ್ ನಾಯಿರಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಕಾಮತ್, ಶಾಲೆಯ ಮುಖ್ಯ ಶಿಕ್ಷಕಿ ಉಷಾ ಮೊದಲಾದವರು ಉಪಸ್ಥಿತರಿದ್ದರು.
ಗಣೇಶ್ ಜಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಪೂಜಾರಿ ವಂದಿಸಿದರು.











