ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾದ ವತಿಯಿಂದ ಇಲ್ಲಿನ ಕೆಜಿಎನ್ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ್ರಶಿಕ್ಷಣವು ವಿಶಿಷ್ಟವಾದ ಕೆಲಸ. ಪಕ್ಷದ ತತ್ವ, ಸಿದ್ಧಾಂತ, ಇತಿಹಾಸ, ಸಾಗಿ ಬಂದ ಹೋರಾಟದ ಬಗ್ಗೆ ತಿಳಿಸಿಕೊಡುವ ಕಾರ್‍ಯ ಇಲ್ಲಿ ಆಗಲಿದೆ. ಕಾರ್‍ಯಕರ್ತರು ಪಕ್ಷದ ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು, ಉನ್ನತ ತರಬೇತಿಯನ್ನು ಪಡೆದು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸಹಕಾರಿ. ಆ ಮೂಲಕ ಪಕ್ಷದ ಬಲವ‘ನೆಗೆ ಎಲ್ಲರೂ ಶ್ರಮಿಸೋಣ ಎಂದರು.
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಎಸ್ಸಿ ಮೋರ್ಚಾದ ಕಾರ್‍ಯದರ್ಶಿ ಮಹೇಂದ್ರ ಕೌತಾಳ್, ಜಿಲ್ಲಾ ಎಸ್ಸಿ ಮೋರ್ಚಾ ಉಸ್ತುವಾರಿ ನಳಿನಿ ಪ್ರದೀಪ್, ಮಹಿಳಾ ಮೋರ್ಚಾ ರಾಜ್ಯ ಪ್ರಮುಖರಾದ ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ ಕುಮಾರ್ ಶೆಟ್ಟಿ, ಕುಂದಾಪುರ ಎಸ್ಸಿ ಮೋರ್ಚಾ ಮಹೇಶ್ ಕಾಳಾವರ, ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಎಸ್ಸಿ ಮೋರ್ಚಾ ಪ.ಕಾರ್‍ಯದರ್ಶಿ ದಿನಕರ ಬಾಬು ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ್ ಕಳಿಂಜಿ ಸ್ವಾಗತಿಸಿದರು.











