ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟೇಶ್ವರ ವೃತ್ತ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
ಅನುಷ್ಕಾ 100 ಮೀ ಓಟದಲ್ಲಿ ಪ್ರಥಮ, 200 ಮೀ ಓಟದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರೀಡಾಕೂಟದ ಬಾಲಕಿಯರ ವಿಭಾಗದ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಶಮಂತ 100 ಮೀ ಓಟದಲ್ಲಿ ದ್ವಿತೀಯ, 200 ಮೀ ಓಟದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರು. ಅದಿತಿ 100 ಮೀ ಓಟದಲ್ಲಿ ತೃತೀಯ, 200 ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಅನುಷ್ಕಾ, ಅದಿತಿ, ನಿಕಿತಾ, ನಾಗಲಕ್ಷ್ಮೀ ಒಳಗೊಂಡ ಬಾಲಕಿಯರ ರಿಲೇ ತಂಡ 100 ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಶಮಂತ, ಪ್ರಥಮ್, ನೀತೇಶ್, ಪ್ರಸನ್ನ ಇವರನ್ನೊಳಗೊಂಡ ಬಾಲಕರ ರಿಲೇ ತಂಡ ತೃತೀಯ ಸ್ಥಾನ ಪಡೆದಿದೆ.











