ನವೆಂಬರ್ 7ರಂದು 1122 ಕೋಟಿ ಯೋಜನೆಗಳ ಶಂಕುಸ್ಥಾಪನೆ ; 201 ಕೋಟಿ ಕಾಮಗಾರಿ ಉದ್ಘಾಟನೆ – ಸಂಸದ ಬಿ.ವೈ.ಆರ್ ಸುದ್ಧಿಗೋಷ್ಟಿ

0
595

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮುಖ್ಯಮಂತ್ರಿಗಳು ಹಾಗೂ ಮಾಜೀ ಮುಖ್ಯಮಂತ್ರಿಗಳು ನವೆಂಬರ್ 7ರಂದು ಬೈಂದೂರಿನಲ್ಲಿ 1122 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ 201 ಕೋಟಿ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ಒಟ್ಟು 1323 ಕೋಟ ಅನುದಾನವನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗುತ್ತಿದೆ ಎಂದು ಸಂಸದ ಬಿ. ವೈ ರಾಘವೇಂದ್ರ ಹೇಳಿದರು. ಅವರು ಚಿತ್ತೂರಿನಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
ನಬಾರ್ಡ್ ಯೋಜನೆಯಡಿಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಸಂಪೂರ್ಣವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ರೂ.585 ಕೋಟಿ (ಒಪ್ಪಂದ 469 ಕೋಟಿ), ಕ್ಲಸ್ಟರ್  -1 (ಪರ್ವತ ಶ್ರೇಣಿ) ಮತ್ತು  ಕ್ಲಸ್ಟರ್ – 2 (ಸಮುದ್ರ ತೀರ ಪ್ರದೇಶಗಳ) ವ್ಯಾಪ್ತಿಯಲ್ಲಿ ಕ್ರಮವಾಗಿ ಹೊಸಂಗಡಿ ಮತ್ತು ಗುಲ್ವಾಡಿಯಲ್ಲಿ ನೀರುನ್ನು ಎತ್ತಿ ಶುದ್ಧೀಕರಿಸಿ 43 ಗ್ರಾಮ ಮಂಚಾಯಿತಿಗಳ 858 ಪಂಚಾಯಿತಿಗಳ ಸುಮಾರು 3 ಲಕ್ಷ ಜನರ ಮನೆ ಬಾಗಿಲಿಗೆ ನೀರು ತಲುಪಿಸುವ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು  ಹೇಳಿದ ಅವರು, ನವೆಂಬರ್ 7ರಂದು ಬೈಂದೂರಿಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೆ ಹಂತದಲ್ಲಿ ರೂ 85 ಕೋಟಿ, 165 ಕೋಟಿ ವೆಚ್ಚದಲ್ಲಿ ಸಿದ್ಧಾಪುರ ಏತ ನೀರಾವರಿ ಯೋಜನೆ, ರೂ 218 ಕೋಟಿ ವೆಚ್ಚದ ಬೈಂದೂರು ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 766(ಸಿ) ರಸ್ತೆ, 20 ಕೋಟಿ ವೆಚ್ಚದಲ್ಲಿ ಮರವಂತೆ ಮತ್ತು ಪಡುವರಿ ಸೋಮೇಶ್ವರ ಬೀಚ್ ಗಳನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ, ರೂ 15.48 ಕೋಟಿ ವೆಚ್ಚದಲ್ಲಿ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ, ರೂ 3.48 ಕೋಟಿ ವೆಚ್ಚದಲ್ಲಿ ಹಳ್ಳಿಹೊಳೆ ಕಬ್ಬಿನಾಲೆ ಸೇತುವೆ ನಿರ್ಮಾಣ, ರೂ 20.75 ಕೋಟಿ ವೆಚ್ಚದಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನಗಳ ಅಭಿವೃದ್ಧಿ, ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ 75 ಕೆರೆಗಳ ಅಭಿವೃದ್ಧಿ ಬೈಂದೂರು ಕ್ಷೇತ್ರಾದ್ಯಂತ 7 ಕೆರೆಗಳ ಅಭಿವೃದ್ಧಿ, 5 ಕೋಟಿ ವೆಚ್ಚದಲ್ಲಿ ಬೈಂದೂರು ವಿಧಾನಸಭಾ ಕ್ಷೇತಾದ್ಯಂತ ಕಾಲುಸಂಕಗಳ ನಿರ್ಮಾಣ, ಬೈಂದೂರು ವಿಧಾನಸಭಾ ಕ್ಷೇತ್ರಾದ್ಯಂತ ಶಾಲೆ-ಕಾಲೇಜುಗಳ ಕೊಠಡಿ, ಹಾಗೂ ಶೌಚಾಲಯ ನಿರ್ಮಾಣ,  ಕೊಲ್ಲೂರು ದೇವಸ್ಥಾನದ ವತಿಯಿಂದ ಗೋಶಾಲೆ ನಿರ್ಮಾಣ, ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಈ ಸಂದರ್ಭ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ , ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.
Click Here

LEAVE A REPLY

Please enter your comment!
Please enter your name here