ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ತ್ರೀ ಶಕ್ತಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗೈದ ಜಾನಕಿ ಹಂದೆಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರ್ಥಪೂರ್ಣ ಎಂದು ಕೆ.ಎಂ.ಎಫ್ ಸಾಸ್ತಾನ ಶಿಬಿರ ಕಛೇರಿಯ ವಿಸ್ತೀರ್ಣಾಧಿಕಾರಿ ಸರಸ್ವತಿ ಹೇಳಿದ್ದಾರೆ.
ಕೋಟತಟ್ಟು ಹಂದಟ್ಟು ನಾಗರೀಕರು ಹಮ್ಮಿಕೊಂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನಕಿ ಹಂದೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರು ಒಂದೊಂದು ಕ್ಷೇತ್ರದಲ್ಲಿ ಸಾಧನೆಗೈಯುತ್ತಾರೆ ಆದರೆ ಜಾನಕಿಯಮ್ಮನ ಸಾಧನೆ ಎಲ್ಲಾ ಪ್ರಶಸ್ತಿಗಳಿಗೂ ಮಿಗಿಲಾದದ್ದು ಈ ದಿಸೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳು ಅರ್ಥಪೂರ್ಣ ವ್ಯವಸ್ಥೆಗೆ ಮುನ್ನುಡಿ ಬರೆದಿದೆ. ತನ್ನ ಇಳಿ ವಯಸ್ಸನ್ನು ಲಕ್ಕಿಸದೆ ಕಾರ್ಯಗಳು ಇನ್ನಷ್ಟು ಪಸರಿಸಲಿ ಎಂದು ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಪಾರ್ವತಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಪಶು ಆಸ್ಪತ್ರೆಯ ಪ್ರಭಾರ ವೈದ್ಯಕೀಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್, ಕೋಟ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ, ಕೆ.ಎಂ.ಎಫ್ ಪಶುವೈದ್ಯಾಧಿಕಾರಿ ನಿಜಾಮ್ ಪಾಟೀಲ್, ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಾತ ಬಾಯರಿ ಸ್ವಾಗತಿಸಿ ,ನಿರೂಪಿಸಿ ವಂದಿಸಿದರು.ಪುಷ್ಭಾ ಕೆ ಹಂದಟ್ಟು ಸಹಕರಿಸಿದರು.











