ವಂಡ್ಸೆಯಲ್ಲಿ ರೈತರ ಉತ್ಪನ್ನ ಮಾರಾಟ ಮತ್ತು ಖರೀದಿ ಕೇಂದ್ರ ಉದ್ಘಾಟನೆ

0
722

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂದನಾಡು ರೈತ ಉತ್ಪಾದಕರ ಕಂಪನಿ ವಂಡ್ಸೆ ಹೋಬಳಿ, ಅಂಪಾರು ಇದರ ವತಿಯಿಂದ ವಂಡ್ಸೆಯ ಹಳೆ ಕೃಷಿಕೇಂದ್ರ ಕಟ್ಟಡದಲ್ಲಿ ಆರಂಭಗೊಂಡ ರಸಗೊಬ್ಬರ, ಕೀಟನಾಶಕ, ಮತ್ತು ಕೃಷಿ ಉಪಕರಣಗಳ ಮಾರಾಟ ಕೇಂದ್ರ ಹಾಗೂ ರೈತರ ಉತ್ಪನ್ನ ಮಾರಾಟ ಮತ್ತು ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನ.8ರಂದು ಜರಗಿತು.

ಉದ್ಘಾಟನೆ ನೆರವೇರಿಸಿದ ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅವರು, ಯಾಂತ್ರೀಕೃತ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತರ ಆದ್ಯತೆಗಳನ್ನು ಪೂರೈಸುವುದು ಮುಖ್ಯವಾಗಿದೆ. ಭತ್ತ ಕಟಾವು ಯಂತ್ರ, ಟ್ರ್ಯಾಕ್ಟರ್ ಮೊದಲಾದ ಯಂತ್ರಗಳನ್ನು ಬಾಡಿಗೆ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಕುಂದನಾಡು ರೈತ ಉತ್ಪಾದಕರ ಕಂಪನಿ ಮೂಲಕ ಆಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಾಗ ಕಾರ್ಯಗಾರಗಳನ್ನು ಏರ್ಪಡಿಸಿ ರೈತಸ್ನೇಹಿಯಾಗಿ ಕಂಪನಿ ಇರಬೇಕು ಎಂದರು.

ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಕೃಷಿಉಪಕರಣಗಳು ಸಿಗುತ್ತಿರುವ ದಿನಗಳಿದ್ದವು. ಕ್ರಮೇಣ ರೈತರಿಗೆ ಅನುಕೂಲವಾಗಿರಬೇಕಾಗಿದ್ದ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಕೃಷಿ ಸಾಲ ನೀಡುವುದು, ವಸೂಲಿ ಮಾಡುವುದು ಇಷ್ಟಕ್ಕೆ ಸೀಮಿತ ಹಂತ ತಲುಪಿದವು. ಇವತ್ತು ಪಡಿತರ ವ್ಯವಸ್ಥೆ ಸಹಕಾರ ಸಂಘಗಳ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ರೀತಿ ಕೃಷಿಕರ ಅವಶ್ಯಕತೆಗಳನ್ನು ಪೂರೈಸುವ ಅವಕಾಶಗಳು ಇದೆ. ಕೃಷಿ ಅನುಕೂಲತೆಗಳನ್ನು ಒದಗಿಸುವ ವಿಚಾರದಲ್ಲಿ ಮುಜುಗರ ಬೇಡ, ರೈತರ ಕೆಲಸ ಮಾಡುವುದು ಪುಣ್ಯದ ಕೆಲಸ ಎಂದರು.

Click Here

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ವಂಡ್ಸೆ ಹೋಬಳಿ ಕೇಂದ್ರದಲ್ಲಿ ಕೃಷಿಕರ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಅವಕಾಶವಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಉತ್ಪಾದಕರ ಕಂಪನಿ ರೈತರಿಗೆ ಅನುಕೂಲವಾಗಿ ಕಾರ್ಯನಿರ್ವಹಿಸಲಿ. ಸ್ಥಳೀಯ ರೈತರ ಅವಶ್ಯಕತೆಗಳು, ಯಾಂತ್ರೀಕೃತ ಕೃಷಿಗೆ ಪೂರಕವಾಗಿ ಯಂತ್ರಗಳನ್ನು ಬಾಡಿಗೆಗೆ ಒದಗಿಸುವ ಕಾರ್ಯವನ್ನು ಮಾಡಲಿ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳ ಮಾರಾಟ ಕೇಂದ್ರ ಉದ್ಘಾಟಿಸಿದರು.

ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕುಂದನಾಡು ರೈತ ಉತ್ಪಾದಕರ ಕಂಪನಿ ಗೌರವ ಅಧ್ಯಕ್ಷರಾದ ಉದಯಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಿತೇಶ, ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮೀನ್ ಶೆಟ್ಟಿ ಉಪಸ್ಥಿತರಿದ್ದರು.

ಬ್ರಹ್ಮಾವರ ಕೆ.ವಿ.ಕೆಯ ಮಣ್ಣು ವಿಜ್ಞಾನಿ ಡಾ.ಜಯಪ್ರಕಾಶ್ ಆರ್ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕುಂದನಾಡು ರೈತ ಉತ್ಪಾದಕ ಕಂಪನಿಯ ನಿರ್ದೇಶಕರು ಉಪಸ್ಥಿತರಿದ್ದರು.

ವಿನಾಯಕ ಉಡುಪ ಬಲಾಡಿ ಪ್ರಾರ್ಥಿಸಿದರು. ಕುಂದನಾಡು ರೈತ ಉತ್ಪಾದಕರ ಕಂಪನಿ ಕಾರ್ಯದರ್ಶಿ ಉಮೇಶ ಶೆಟ್ಟಿ ಶಾನ್ಕಟ್ ಸ್ವಾಗತಿಸಿ, ಕುಂದನಾಡು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಸಂತೋಷ ಕುಮಾರ ಶೆಟ್ಟಿ ಬಲಾಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಆಚಾರ್ ವಂದಿಸಿದರು.

Click Here

LEAVE A REPLY

Please enter your comment!
Please enter your name here