ಕುಂದಾಪುರ ಮಿರರ್ ಸುದ್ದಿ…
Video:
ಕುಂದಾಪುರ : ಡಿಸಿಸಿ ಬ್ಯಾಂಕಿನ ನವೋದಯ ಸ್ವಸಹಾಯ ಸಂಘಗಳು ಲಕ್ಷಾಂತರ ಮಹಿಳೆಯರಿಗೆ ನೆಮ್ಮದಿಯ ಸ್ವಾವಲಂಬನೆ ನೀಡಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಎಂ.ಎನ್.ರಾಜೇಂದ್ರಕುಮಾರ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಸಿದ್ದಾಪುರ ಶಾಖೆಯ ನೂತನ ಕಟ್ಟಡ ‘ ಉತ್ಕೃಷ್ಟ ‘ ವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಹಾಗೂ ನೆಮ್ಮದಿ ಇಲ್ಲದೆ ಇದ್ದರೆ ಎಷ್ಟೇ ಶ್ರೀಮಂತಿಕೆ ಇದ್ದರೂ ಅದು ಪ್ರಯೋಜನವಿಲ್ಲ. ಮಹಿಳೆಯರು ಸ್ವತಂತ್ರವಾಗಿ, ಸಮಾನವಾಗಿ ಬೆಳೆಯಬೇಕು. ನಮಗೆ ಪಹಣಿ ಪತ್ರಕ್ಕಿಂತ ನಂಬಿಕೆಯೇ ಮುಖ್ಯ. ಸಮಾಜದ ಎಲ್ಲ ವರ್ಗದ ಜನರನ್ನು ತಲುಪುತ್ತಿರುವ ಸಹಕಾರಿ ಕ್ಷೇತ್ರದಲ್ಲಿ ದೊರಕುವ ಸೇವೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ದೊರಕುವುದಿಲ್ಲ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮೀಣ ಭಾಗಗಳು ಸೇರಿ ನೂರಾರು ಶಾಖೆಗಳನ್ನು ಪ್ರಾರಂಭಿಸಿ ಸಮಾಜದ ಒಟ್ಟಾರೆ ಅಭ್ಯುದಯಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಕಾರಣವಾಗಿದೆ. ಜನಾಭಿಪ್ರಾಯಕ್ಕೆ ಗೌರವ ಕೊಟ್ಟು ಪುನರಾರಂಭಿಸಿದ ಯಶಸ್ವಿನಿ ಯೋಜನೆಗೆ 30 ಲಕ್ಷ ನೊಂದಾವಣೆ ಗುರಿಯನ್ನು ಇರಿಸಿಕೊಳ್ಳಲಾಗಿದ್ದು, ಈಗಾಗಲೇ 23 ಲಕ್ಷ ಜನರು ನೊಂದಾವಣೆ ಆಗಿದೆ ಎಂದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಎಟಿಎಂ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭದ್ರತಾ ಕೋಶ ಉದ್ಘಾಟಿಸಿದರು. ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಹೊಸ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಕುಲಾಲ್ ಠೇವಣಿ ಪತ್ರ ವಿತರಿಸಿದರು. ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿದ್ವಾನ್ ಗಣೇಶ್ ಅಡಿಗ ಸಾಲಪತ್ರ ವಿತರಿಸಿದರು. ಸಿದ್ದಾಪುರ ಜನತೆಯ ಪರವಾಗಿ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ವತಿಯಿಂದ ಎಂ.ಎನ್.ರಾಜೇಂದ್ರಕುಮಾರ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಕಟ್ಟಡ ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ, ಶಾಖಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಕೆ, ಮನೋಹರ ಶೆಟ್ಟಿ ಅಂಪಾರು, ಹರಿನಾಥ್, ಉದಯ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಿ, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರಿ ಕ್ಷೇತ್ರದ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಅಶೋಕ್ ಪೂಜಾರಿ ಬೀಜಾಡಿ, ಗಂಗಾಧರ ಹೆಗ್ಡೆ ಮಂದಾರ್ತಿ, ಸುಧಾಕರ ಶೆಟ್ಟಿ ಬಾಂಡ್ಯ, ಜಯರಾಮ್ ಶೆಟ್ಟಿ ಬೆಳ್ವೆ, ಯು.ಕೃಷ್ಣಮೂರ್ತಿ ಕುಂದಾಪುರ, ಎಸ್.ಸಚ್ಚಿದಾನಂದ ಚಾತ್ರ, ಶಂಕರನಾರಾಯಣ ಯಡಿಯಾಳ, ರತ್ನಾಕರ ಶೆಟ್ಟಿ ಇದ್ದರು.
ನವೋದಯ ಸ್ವಸಹಾಯ ಸಂಘದ ಸದಸ್ಯೆ ರೋಶನಿ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರು, ಎಂ.ಮಹೇಶ್ ಹೆಗ್ಡೆ ಪ್ರಾಸ್ತಾವಿಸಿದರು, ಶಿಕ್ಷಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಿರೂಪಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ವಂದಿಸಿದರು.











