ಪಂಚವರ್ಣದ 301ನೇ ಭಾನುವಾರ ಕೋಡಿ ಬೀಚ್ ರೋಡ್ ಕ್ಲಿನಿಂಗ್

0
291

Click Here

Click Here

ರಸ್ತೆ ಬದಿ ಕಸ ಎಸೆಯುವರ ಮೇಲೆ ಕಠಿಣ ಕ್ರಮ ಅಗತ್ಯ – ಕೃಷ್ಣ ಪೂಜಾರಿ
ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ವಚ್ಛತೆ ಬಗ್ಗೆ ಪ್ರತಿಯೊರ್ವರು ಜಾಗೃತರಾಗಬೇಕು ಗಲ್ಲಿ ಗಲ್ಲಿಗಳಲ್ಲಿ‌ಕಸ ಎಸೆಯುವವರಿಗೆ ಕಠಿಣ ಕ್ರಮ ಅಗತ್ಯ ಎಂದು ಉಡುಪಿ ಎ.ಪಿ ಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ.ಪಿ ಹೇಳಿದರು.
ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಮಣೂರು ಫ್ರೆಂಡ್ಸ್  ಇವರುಗಳ ಸಹಯೋಗದೊಂದಿಗೆ ಸಾಲಿಗ್ರಾಮ ಪಟ್ಟಣಪಂಚಾಯತ್, ಕೋಡಿ ಗ್ರಾ.ಪಂ ಸಹಯೋಗದೊಂದಿಗೆ 301ನೇ ವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಆದರೆ ವಿದ್ಯಾವಂತರೇ ಕಸ ಎಸೆಯುವ ಮನಸ್ಥಿತಿ ಸೃಷ್ಠಿಸಿಕೊಂಡಿರುವುದು ಬೇಸರದ ಸಂಗತಿ ಎಂದು ಖೇಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಮಾರು 30ಕ್ಕೂ ಅಧಿಕ ಚೀಲ 400ಕೆಜಿ ಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೀಚ್ ರಸ್ತೆಯಿಂದ ಮುಕ್ತಗೊಳಿಸಲಾಯಿತು.
ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Click Here

LEAVE A REPLY

Please enter your comment!
Please enter your name here