ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ರೈಲ್ವೆ ನಿಲ್ದಾಣದ ಸುತ್ತಮುತ್ತ ಭಾನುವಾರ ಬೆಳಿಗ್ಗೆ ಬೃಹತ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಟೀಮ್ ಆನಂದದ ಸೃಷ್ಟಿಯ 103ನೇ ವಾರದ ಭಾಗವಾಗಿ, ಕಂದಾವರ ಗ್ರಾಮ ಪಂಚಾಯತ್, ಕ್ಲೀನ್ ಕುಂದಾಪುರ ತಂಡ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ ಕುಂದಾಪುರ, ಕಂದಾವರ ಗ್ರಾಮ ಪಂಚಾಯತ್, ಮತ್ತು ಸ್ಥಳೀಯರು ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು, ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿದರು.
ಸ್ವಚ್ಛತಾ ಕಾರ್ಯದ ವೇಳೆ ರೈಲ್ವೆ ನಿಲ್ದಾಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಹಾಗೂ ಇತರ ಕಸಗಳನ್ನು ತೆರವುಗೊಳಿಸಿ ಒಟ್ಟು 86 ಕಸದ ಚೀಲಗಳನ್ನು ಸಂಗ್ರಹಿಸಲಾಯಿತು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಂದಾವರ ಪಂಚಾಯತನ ಅಭಿವ್ರದ್ದಿ ಅಧಿಕಾರಿ ಸುನಿಲ್ ಕಾರ್ಯದರ್ಶಿ ಸಂಜೀವ, ಮಹಾಬಲೇಶ,
ಕ್ಲೀನ ಕುಂದಾಪುರದ ಭರತ್ ಬಂಗೇರ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆಯ ಗಣೇಶ ಪುತ್ರನ್, ಆನಂದದ ಸ್ರಷ್ಠೀ ತಂಡದ ಶ್ರೀನಿವಾಸ್ ಕುಂದರ್ ಭಾಗವಹಿಸಿದರು ಗೀತಾನಂದ ಪೌಂಡೇಶನ್ ನ ರವಿಕಿರಣ ಕೋಟ, ಪ್ರಕಾಶ್ ಮತ್ತು ಮಿಥುನ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು
ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಸಂಘಟಕರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.












