Category: ಸುದ್ದಿ

  • ಭಂಡಾರ್ಕಾರ್ಸ್ ಕಾಲೇಜು: ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ

    ಭಂಡಾರ್ಕಾರ್ಸ್ ಕಾಲೇಜು: ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅಕ್ಟೋಬರ್ 12ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗುತ್ತಿರುವ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ” ನಡೆಯಿತು.

    ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ಶಾಂತಾರಾಮ ಪ್ರಭು ಅವರು ಉದ್ಘಾಟಿಸಿ ಮಾತನಾಡಿ, ಸಮುದಾಯದ ಒಳಿತು ಮತ್ತು ಉನ್ನತಿಯ ಉದ್ದೇಶದ ನೆಲೆಯಲ್ಲಿ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಆರಂಭಿಸುತ್ತಿದ್ದೇವೆ. ಇದರಿಂದ ಕುಂದಾಪುರದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಬೆಳೆಸಿಕೊಳ್ಳಲು ಅವಕಾಶವಿದೆ. ಜೊತೆಗೆ ಕುಂದಾಪುರ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬಹುದು ಎಂದು ಹೇಳಿದರು.

    ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಮಾರ್ಗದರ್ಶಕರಾದ ಯು.ಎಸ್.ಶೆಣೈ ಮಾತನಾಡಿ, ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಮಾಜಮುಖಿಯಾಗೋಣ. ಎಲ್ಲರೂ ಒಟ್ಟಾಗಿ ರೇಡಿಯೋ ಕುಂದಾಪ್ರ 89.6 ಎಫ್.ಎಂ ಮೂಲಕ ಜಗತ್ತಿನಾದ್ಯಂತ ಕುಂದಾಪುರದ ಕಂಪನ್ನು ಪಸರಿಸೋಣ ಎಂದು ಹೇಳಿದರು.ಮತ್ತು ವಿವಿಧ ಕಾರ್ಯಕ್ರಮಗಳನ್ನು ನೀಡಬಹುದು ಎಂಬುದರ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
    ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ನಾವು ಎಲ್ಲಾ ಸಮುದಾಯವನ್ನು ತಲುಪಬಹುದು ಎಂದರು.

    ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.

    ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
    ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಸುಮಲತಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರೇಡಿಯೋ ಕುಂದಾಪ್ರ 89.6 ಎಫ್.ಎಂ ಇದರ ಕಾರ್ಯಕ್ರಮಗಳ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ವಂದಿಸಿದರು.

  • ಪಾಂಡೇಶ್ವರ – ಗ್ರಾಮಪಂಚಾಯತ್ ಸಮರ್ಪಕ ಮಾಹಿತಿ ನೀಡದೆ ಡ್ಯಾಮ ನಿರ್ಮಾಣ ಸರ್ವೆಕಾರ್ಯ ಎಷ್ಟು ಸೂಕ್ತ – ಗ್ರಾಮಸಭೆಯಲ್ಲೆ ಸಣ್ಣನೀರಾವರಿ ಇಲಾಖಾಧಿಕಾರಿಯನ್ನು ತರಾಟೆ ತೆಗೆದುಕೊಂಡ ಗ್ರಾಮಪಂಚಾಯತ್

    ಪಾಂಡೇಶ್ವರ – ಗ್ರಾಮಪಂಚಾಯತ್ ಸಮರ್ಪಕ ಮಾಹಿತಿ ನೀಡದೆ ಡ್ಯಾಮ ನಿರ್ಮಾಣ ಸರ್ವೆಕಾರ್ಯ ಎಷ್ಟು ಸೂಕ್ತ – ಗ್ರಾಮಸಭೆಯಲ್ಲೆ ಸಣ್ಣನೀರಾವರಿ ಇಲಾಖಾಧಿಕಾರಿಯನ್ನು ತರಾಟೆ ತೆಗೆದುಕೊಂಡ ಗ್ರಾಮಪಂಚಾಯತ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಈ ಗ್ರಾಮದಲ್ಲಿ ಸಿಹಿ ನೀರು ಶೇಖರಣೆ ಎಂಬ ನೆಪದಲ್ಲಿ ಡ್ಯಾಮ ನಿರ್ಮಾಣ ಕಾರ್ಯದ ಸರ್ವೆಕಾರ್ಯ ಎಷ್ಟು ಸೂಕ್ತ ಈ ಬಗ್ಗೆ ಸಾಕಷ್ಟು ಬಾರಿ ವಿರೋಧಿಸಿ ಪ್ರತಿಭಟಿಸಿ ಪತ್ರ ಬರೆಯಲಾಗಿದೆ ಗ್ರಾಮಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದೇವೆ ಇದು ಸಮಂಜಸವೇ ಎಂದು ಪಾಂಡೇಶ್ವರ ಗ್ರಾಮಸಭೆಯಲ್ಲಿ ಗ್ರಾಮಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ ಘಟನೆ ಶುಕ್ರವಾರ ನಡೆಯಿತು.

    ಪಾಂಡೇಶ್ವರ ಗ್ರಾಮಪಂಚಾಯತ್ ವಠಾರದಲ್ಲಿ ಪ್ರಥಮ ಗ್ರಾಮಸಭೆಯಲ್ಲಿ ಉಡುಪಿ ಜಿಲ್ಲೆಯ ಸಣ್ಣನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಾಂತಾರಾಮ್ ಇವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು ಸತತ ಹಲವಾರು ಗ್ರಾಮಸಭೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಪ್ರತಿಭಟಿಸಿ ಈ ಯೋಜನೆಯಿಂದ ಗ್ರಾಮದಲ್ಲಿ ಕೃತಕ ನೆರೆ ಸೃಷ್ಠಿಯಾಗಲಿದೆ, ಗ್ರಾಮದ ಕೃಷಿ ಕಾರ್ಯಕ್ಕೂ ಸಮಸ್ಯೆಯಾಗಲಿದೆ ಪಂಚಾಯತ್ ಪರಿಗಣನೆಗೆ ಬಾರದ ಯೋಜನೆ ಅನುಷ್ಠಾನ ಹೇಗೆ ಸಾಧ್ಯ, 300ಕೋಟಿ ಯೋಜನೆಯಿಂದ ಗುತ್ತಿಗೆದಾರರಿಗೆ ಲಾಭವೇ ವಿನಹ ಗ್ರಾಮಸ್ಥರಿಗಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

    ಯೋಜನೆ ಜಾರಿಗೊಳಿಸುದಾದರೆ ಸಮರ್ಪಕ ತಡೆಗೊಡೆ ರಚಿಸಿ
    ಈ ಯೋಜನೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೆ ಮುಂದುವರೆಸುವುದಾದರೆ ಇಡೀ ಗ್ರಾಮದ ನದಿ ತೀರದಲ್ಲಿ ತಡೆಗೊಡೆ ರಚಿಸಿ ಯೋಜನೆ ಸಮರ್ಪಕವಾಗಿಸಿ ಇಲ್ಲ ಯೋಜನೆ ಕೈಬಿಡಿ ಎಂದು ಸಭೆ ಆಗ್ರಹಿಸಿತು.

    ಮೇಲಾಧಿಕಾರಿಗಳ ಗಮನಕ್ಕೆ
    ಈ ಯೋಜನೆ ಹಿಂದಿನ ಇರ್ವರು ಶಾಸಕರ ಯೋಜನೆಯಾಗಿದ್ದು ನಾವು ಇದರಲ್ಲಿ ಏನು ಮಾಡಲು ಸಾಧ್ಯ ಅನುಷ್ಠಾನ ಹಾಗೂ ಇಲ್ಲಿನ ನೈಜ ಸಮಸ್ಯೆಯ ಬಗ್ಗೆ ನಿರ್ಣಯಿಸಿ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ನಾನು ಸಹ ಈ ಬಗ್ಗೆ ವರದಿ ನೀಡುತ್ತೇನೆ ಎಂದು ಅಧಿಕಾರಿ ಉತ್ತರಿಸಿದರು.

    ಗೃಹಲಕ್ಷ್ಮೀ ಯೋಜನೆ ಗೊಂದಲ
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ ವಿವಿಧ ಯೋಜನೆಯ ಬಗ್ಗೆ ಉಲ್ಲೇಖಿಸುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ಹಣ ಸಮರ್ಪಕವಾಗಿ ಖಾತೆ ಬರಲಿಲ್ಲ ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಲ್ವಿಚಾರಕಿ ಸರಕಾರದ ಯೋಜನೆಯಲ್ಲಿ ಸಮಸ್ಯೆಯಲ್ಲ ಬದಲಾಗಿ ನಿಮ್ಮ ಖಾತೆಯಲ್ಲಿ ಲೋಪ ಹಾಗೂ ಆಧಾರ ಸಮಸ್ಯೆ ಇದ್ದರೆ ಖಾತೆಗೆ ಹಣ ವಿಳಂಬವಾಗಿದೆ ಸಮಸ್ಯೆಗಳಿದ್ದರೆ ಅಂಗನವಾಡಿ ಕಾರ್ಯಕರ್ತರಲ್ಲಿ ಮಾಹಿತಿ ನೀಡಿ ಬಗೆಹರಿಸಿಕೊಳ್ಳಿ ಎಂದು ಉತ್ತರಿಸಿದರು.

    ಪಂಚಾಯತ್ ವ್ಯಾಪ್ತಿಯಲ್ಲಿ ಲೈಸೆನ್ಸ್ ಪಡೆದು ಕಾಮಗಾರಿ ನಿರ್ವಹಿಸಿ
    ಪಂಚಾಯತ್ ವ್ಯಾಪ್ತಿಯ ರಸ್ತೆಯಲ್ಲಿ ಸರಕಾರದ ಕಾನೂನು ಗಾಳಿಗೆತೂರಿ ಕಲ್ಲು ಇರಿಸುವುದಲ್ಲದೆ ಕಂಪೌಂಡ್ ನಿರ್ಮಿಸಲಾಗುತ್ತಿದೆ ಇದರಿಂದ ವಾಹನ ಸವಾರರಿಗೆ ಸಮಸ್ಯೆ ಏರ್ಪಡುತ್ತಿದೆ ಈ ಬಗ್ಗೆ ಪಂಚಾಯತ್ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಇನ್ನುಳಿದಂತೆ ವಿವಿಧ ಇಲಾಖಾಧಿಕಾರಿಗಳು ಗ್ರಾಮಸ್ಥರಿಗೆ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

    ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

    ಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ವರದಿಯನ್ನು ಪಂಚಾಯತ್ ಕಾರ್ಯದರ್ಶಿ ವಿಜಯ ಹಾಗೂ ಸಿಬ್ಬಂದಿ ಸಂತೋಷ್ ಮಂಡಿಸಿದರು. ಸಭೆಯನ್ನು ಪಂಚಾಯತ್ ಸಿಬ್ಬಂದಿ ಸಂತೋಷ್ ನಿರೂಪಿಸಿದರು.

  • ಕಾರ್ತಟ್ಟು- ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ದೈಹಿಕ ಶಿಕ್ಷಕ ಸತೀಶ್ ಶೆಟ್ಟಿ ಆಯ್ಕೆ

    ಕಾರ್ತಟ್ಟು- ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ದೈಹಿಕ ಶಿಕ್ಷಕ ಸತೀಶ್ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು, ಚಿತ್ರಪಾಡಿ ವತಿಯಿಂದ ನೀಡಲಾಗುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ, ವಾಗ್ಮಿ ಸತೀಶ್ ಶೆಟ್ಟಿ ಆಯ್ಕೆ ಯಾಗಿದ್ದಾರೆ.

    ಈ ಬಾರಿಯ ಅಘೋರೇಶ್ವರ ಕಲಾರಂಗದ ರಾಜ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಅಘೋರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ.18 ರ ಶನಿವಾರದಂದು ಕೋಟ ಮೂರುಕೈನ ಬಳಿಯಿರುವ ಶ್ರೀ ಅಘೋರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದ್ದು ಈ ಬಾರಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ವಾಗ್ಮಿ ದೈಹಿಕ ಶಿಕ್ಷಕ ಸತೀಶ್ ಶೆಟ್ಟಿಯವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು.

    ರಾಜ್ಯೋತ್ಸವ ಪ್ರಶಸ್ತಿಯು ಬೆಳ್ಳಿಯ ಸ್ಮರಣಿಕೆಯಾಗಿದ್ದು ,ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕಲಾರಂಗದ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಚಿತ್ತೂರು :ಗಾಂಧೀ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ಎಸ್.ಡಿಎಂಸಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು

    ಚಿತ್ತೂರು :ಗಾಂಧೀ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ಎಸ್.ಡಿಎಂಸಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಈ ಬಾರಿಯ 154ನೇ ಗಾಂಧೀ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಎಸ್.ಡಿ.ಎಂ.ಸಿ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಗಮನ ಸೆಳೆದಿದ್ದಾರೆ. ಅಬ್ದುಲ್ ಸಲಾಂ ಚಿತ್ತೂರು ಹಾಗೂ ಅವರ ಕುಟುಂಬ ತಮ್ಮ ಮನೆಯಲ್ಲಿಯೇ ಗಾಂಧೀ ಜಯಂತಿ ಆಚರಿಸಿಕೊಂಡಿದ್ದು, ವಂಡ್ಸೆ ಗ್ರಾಮ ಪಂಚಾಯತ್ ನ ಎಸ್ ಎಲ್ ಆರ್ ಎಂ ಘಟಕದ ಕಸ ವಿಲೇವಾರಿ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಗಾಂಧೀಜಿಯ ರಾಮ ರಾಜ್ಯದ ಕನಸಿಗೆ ಸ್ಪಂದಿಸಿದ್ದಾರೆ.

    ವಂಡ್ಸೆ ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಎಸ್ ಎಲ್ ಆರ್ ಎಂ ಘಟಕದ ಸದಸ್ಯರು ಕಳೆದ ಐದು ವರ್ಷಗಳಿಂದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಅಂಗಡಿಗಳಿಂದ ದಿನಂಪ್ರತಿ ಕಸ ಸಂಗ್ರಹಿಸಿ ಕೊಂಡು ಹೋಗುತ್ತಿರುವುದರಿಂದ ಪ್ರತಿ ಮನೆಯ ಮತ್ತು ಅಂಗಡಿಯ ಪರಿಸರ ಬಹಳ ಸುಂದರವಾಗಿ ಸ್ವಚ್ಛವಾಗಿತ್ತು, ಅಲ್ಲದೆ ದಿನಂಪ್ರತಿ ಕಸ ಸಂಗ್ರಹಣೆಗೆ ಬರುವ ವಾಹನ ಚಾಲಕರು ಮತ್ತು ಸಿಬ್ಬಂದಿಗಳು ಮನೆಯವರೊಂದಿಗೆ ಉತ್ತಮವಾಗಿ ನಡವಳಿಕೆ ಸಹನೆ ತಾಳ್ಮೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು, ಗಾಂಧಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ SLRM ಸಿಬ್ಬಂದಿಗಳನ್ನು ಈ ಬಾರಿಯ ಗಾಂಧೀ ಜಯಂತಿಯ ದಿನದಂದು ಅವರ ಕರ್ತವ್ಯದ ನಡುವೆ ಎಸ್ ಎಲ್ ಆರ್ ಎಂ ತಂಡದ ಮೇಲ್ವಿಚಾರಕರಾದ ಶ್ವೇತಾ ,ಅಶ್ವಿನಿ ಚಾಲಕ ಸತೀಶ್ ಸಿಬ್ಬಂದಿಗಳಾದ ಚಂದ್ರ ಮತ್ತು ಗಣೇಶ್ ಇವರನ್ನು ಅಬ್ದುಲ್ ಸಲಾಂ ಚಿತ್ತೂರು ಕುಟುಂಬ ಹಾಗೂ ನೆರೆಹೊರೆಯವರು ಅಬ್ದುಲ್ ಸಲಾಂರ ಮನೆ ದಾರುಸ್ಸಲಾಂನಲ್ಲಿ ಗೌರವಿಸಿ ಅಭಿನಂದಿಸಿದ್ದಾರೆ.

    ಸ್ಥಳೀಯ ವೈದ್ಯ, ಚಿತ್ತೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಡಾ. ರಾಜೇಶ್ ಬಾಯರಿಯವರು ಎಸ್ ಎಲ್ ಆರ್ ಎಂ ನ ಐವರು ಸಿಬ್ಬಂದಿಗಳನ್ನು ಗೌರವಿಸಿ ಅಭಿನಂದಿಸಿ ಮಾತನಾಡಿ, ಪರಿಸರ ಸ್ವಚ್ಛತೆಯೊಂದಿಗೆ ದೇಶವನ್ನೇ ಸ್ವಚ್ಛಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ. ದೇಶಾದ್ಯಂತ ಕರ್ತವ್ಯ ನಿರ್ವಹಿಸುವ ಲಕ್ಷಾಂತರ ಸ್ವಚ್ಛತಾ ಸಿಬ್ಬಂದಿಗಳಿಗೆ ಈ ಗೌರವ ಸಲ್ಲಬೇಕು ಎಂದರು.

    ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿಯಂದೇ ಹುಟ್ಟಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ. ಪೂಜಾರಿ ಅವರನ್ನು ಅಭಿಮಾನಿಗಳು, ಗೆಳೆಯರು ಅಭಿನಂದಿಸಿದರು.ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಯವರ ಶ್ರಮ ಇಂದು ಸಾರ್ಥಕತೆಯನ್ನು ಕಾಣುತ್ತಿದೆ ಎಂದರು,

    ಚಿತ್ತೂರು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ, ಹಿರಿಯರಾದ ಹಸನ್ ಸಾಹೇಬ್ , ಉತ್ತಮ ಕೃಷಿಕರಾದ ಹರವರಿ ಗುಂಡು ಪೂಜಾರಿ, ಸೂಪರ್ ಮಾರ್ಕೆಟ್ ಸಂತೋಷ್ ಶೆಟ್ಟಿ, ಸಂಜೀವ ಭಂಡಾರಿ, ಮಹಾಬಲ ಶೆಟ್ಟಿ, ಕೆ .ಅಬ್ದುಲ್ ರೆಹಮಾನ್ , ಮೋನು ಸಾಹೇಬ್, ಹಂಝಾ ಸಾಹೇಬ್, ಮೂಕಾಂಬುಶೆಡ್ತಿ , ಪದ್ಮಾವತಿ ಶೆಟ್ಟಿ, ಅಮನ್, ನೌಶಾದ್ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಪದಾಧಿಕಾರಿಗಳಾದ ಕುಸುಮಾಕರ ಪೂಜಾರಿ, ಇ. ಮಹಮ್ಮದ್ , ರಿಯಾಝ್, ರಿಕ್ಷಾ ಚಾಲಕರು ಮತ್ತು ನೆರೆಹೊರೆಯವರು ಉಪಸ್ಥಿತರಿದ್ದರು, ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಸಿ ಸ್ವಾಗತಿಸಿ ವಂದಿಸಿದರು.

  • ಖಂಬದಕೋಣೆ: ಉದ್ಯೋಗ ಖಾತರಿ ಕೂಲಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕೂಲಿಕಾರರಿಂದ ಬೃಹತ್ ಪ್ರತಿಭಟನೆ

    ಖಂಬದಕೋಣೆ: ಉದ್ಯೋಗ ಖಾತರಿ ಕೂಲಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕೂಲಿಕಾರರಿಂದ ಬೃಹತ್ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಅಖಿಲಭಾರತ ಕೃಷಿಕೂಲಿಕಾರರ ಸಂಘ(AIAWU)ದ ಕೇಂದ್ರ ಕಾರ್ಯಕಾರಿ ಸಮಿತಿಯು, ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಕನಿಷ್ಟಕೂಲಿ ದಿನಕ್ಕೆ ರೂ.600 ಮತ್ತು 200 ದಿನಗಳ ಕೆಲಸ ಕೊಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೇಶವ್ಯಾಪಿ ಜರುಗುವ ಹೋರಾಟದ ಭಾಗವಾಗಿ
    ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಖಂಬದಕೋಣೆ ಗ್ರಾಮ ಪಂಚಾಯತ್ ಕಚೇರಿ ಎದುರು ಕೃಷಿ ಕೂಲಿಕಾರರ ಪ್ರತಿಭಟನೆ ಯಶಸ್ವಿಯಾಗಿ ಜರುಗಿತು.

    ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ ರವರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಸಲ್ಲಿಸಲಾಯಿತು.

    ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ,ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸ್ಥಳೀಯ ಮುಖಂಡರಾದ ಅನುಷ, ದಾರದೇವಾಡಿಗ, ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.

  • ಉಡುಪಿ :ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

    ಉಡುಪಿ :ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ: ರಾಜ್ಯ ಸರ್ಕಾರದ ಸುತ್ತೋಲೆ ಹಾಗೂ ಅಧಿಸೂಚನೆಯಂತೆ ಕನ್ನಡ ಭಾಷೆಯನ್ನು ರಾಜ್ಯದ ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಅದರನ್ವಯ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯತ್ ಎಲ್ಲಾ ಅಧೀನ ಕಛೇರಿ, ಅಂಗಡಿ ಮುಗ್ಗಟ್ಟು, ಮಾರಾಟ ಮಳಿಗೆ, ಹೊಟೇಲ್, ಬ್ಯಾಂಕ್, ಕಂಪೆನಿಗಳಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಹೆಚ್ಚು ಎದ್ದು ಕಾಣುವ ಹಾಗೆ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಸಾಲಿಗ್ರಾಮ – ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಹೂವಿನ ಕೋಲು ಪ್ರದರ್ಶನ

    ಸಾಲಿಗ್ರಾಮ – ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಹೂವಿನ ಕೋಲು ಪ್ರದರ್ಶನ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಹಿನ್ನಲ್ಲೆಯಲ್ಲಿ ಅ.10 ರಂದು ಕಾರಂತ ರಂಗ ರಥ ಮಾನಸ ಮಾನಸ ಸಾಲಿಗ್ರಾಮದಲ್ಲಿ ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಟ್ರಸ್ಟ್ ವತಿಯಿಂದ
    ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ರಾಜಶೇಖರ ಹೆಬ್ಬಾರ್ ತಂಡದವರಿಂದ ಹೂವಿನ ಕೋಲು ಕಲೆಯನ್ನು ಪ್ರದರ್ಶಿಸಲಾಯಿತು.

    ಇದೇ ಸಂದರ್ಭದಲ್ಲಿ ಕುಂಭಾಶಿ ವಿಶ್ವವಿನಾಯಕ ಸಿಬಿಎಸ್‍ಸಿ ಶಾಲೆ, ಟ್ರಸ್ಟ್, ಬಾಂಡ್ಯ ಎಜುಕೇಶನ್
    ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ , ಇಲ್ಲಿನ ವಿದ್ಯಾರ್ಥಿಗಳು ಕಾರಂತ ಸ್ಮೃತಿ ಚಿತ್ರ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.

    ಟ್ರಸ್ಟ್‌ನ ವಿಶ್ವಸ್ಥರಾದ ಗುಜ್ಜಾಡಿ ಪ್ರಭಾಕರ್ ನಾಯಕ್, ಗುರುರಾಜ್,ವಿಶ್ವನಾಥ ಕಾಮತ್, ಕೋಡಿ ಚಂದ್ರಶೇಖರ್ ನಾವಡ ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪ್ರಾಧ್ಯಾಪಕರಾದ ವಿಶಾಲ, ರವಿಶಂಕರ ಪ್ರಾಧ್ಯಾಪಕರಾದ ಪ್ರದೀಪ, ಆನಂದ, ಸುರೇಶ ಉಪಸ್ಥಿತರಿದ್ದರು.

  • ಕುಂದಾಪುರ :ವಿಶೇಷಚೇತನರಿಗೆ ತೊಂದರೆ ಕೊಡಬೇಡಿ – ಮಾಜೀ ಆಯುಕ್ತ ಕೆ.ವಿ ರಾಜಣ್ಣ

    ಕುಂದಾಪುರ :ವಿಶೇಷಚೇತನರಿಗೆ ತೊಂದರೆ ಕೊಡಬೇಡಿ – ಮಾಜೀ ಆಯುಕ್ತ ಕೆ.ವಿ ರಾಜಣ್ಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಂದಾಯ ಇಲಾಖೆಯಲ್ಲಿ ವಿಶೇಷಚೇತನರ ಪಿಂಚಣಿಗೆ ಸತಾಯಿಸಬೇಡಿ. ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ ಎಂದು ಅಂಗವಿಕಲ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ತಹಶೀಲ್ದಾರ್‌ಗೆ ಸೂಚಿಸಿದರು. ಅವರು ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮುದಾಯ ಆಧಾರಿತ ವಿಕಲ ಚೇತನ ಪುನಶ್ಚೇತನ ಕಾರ್ಯಕ್ರಮದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

    ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ಮಾತ್ರ ಡಿಡಿಆರ್‌ಸಿ ಕಾರ್ಯನಿರ್ವಹಿಸುತ್ತಿದೆ. 34ರ ಪೈಕಿ 14 ಕಡೆ ಮಾತ್ರ ಅಸ್ತಿತ್ವದಲ್ಲಿದೆ. ವಿಕಲಚೇತನರಿಗೆ ಮೀಸಲಾದ ಶೇ.5 ನಿಧಿಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸೌಲಭ್ಯಗಳನ್ನು ನೀಡಬೇಕು ಎಂದರು.

    ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆನ್ನುಹುರಿ ಸಮಸ್ಯೆಯಿಂದ ನರಳುತ್ತಿರುವವರಿಗೆ ಪುನರ್ವಸತಿ ಕೇಂದ್ರಕ್ಕಾಗಿ ಹೊಸಂಗಡಿಯಲ್ಲಿರುವ ಕೆಪಿಸಿ ಆಸ್ಪತ್ರೆಯನ್ನು ನೀಡಲು ಮನವಿ ಮಾಡಲಾಗಿದೆ. ಇಲ್ಲಿ ಸೇವಾಭಾರತಿ ಕನ್ಯಾಡಿ ಇದರ ಅಂಗಸಂಸ್ಥೆ ಮೂಲಕ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದರು.

    ಸರ್ಕಾರದ ಮಾನದಂಡ ಪ್ರಕಾರ ಸೌಲಭ್ಯ ಪಡೆಯಲು ಶೇ.40 ಅಂಗವೈಕಲ್ಯ ಹೊಂದಿರಬೇಕು. ಶೇ.10 ಅಂಗವೈಕಲ್ಯ ಇದ್ದರೂ ಕೆಲವೊಮ್ಮೆ ಸೌಲಭ್ಯಗಳ ಅಗತ್ಯವಿರುತ್ತದೆ. 1 ಕಣ್ಣು ಹೋದರೆ ಶೇ.36 ಎಂದು ಪ್ರಮಾಣಪತ್ರ ನೀಡಲಾಗುತ್ತದೆ. ಅಂತಹವರಿಗೆ ಕೆಲವೊಂದು ಯೋಜನೆಯಲ್ಲಿ ರಿಯಾಯಿತಿಯ ಅಗತ್ಯ ಇರುತ್ತದೆ. ಆದ್ದರಿಂದ ಈ ಮಾನದಂಡವನ್ನು ಪರಿಷ್ಕರಿಸಲು ಸರಕಾರದ ಸಂಬಂಧಪಟ್ಟವರ ಜತೆ ಮಾತನಾಡುವುದಾಗಿ ಹೇಳಿದರು.

    ಕುಂದಾಪುರ ಉಪವಿಭಾಗ ಆಸ್ಪತ್ರೆಯಲ್ಲಿ ಇರುವ ಡಯಾಲಿಸಿಸ್ ವ್ಯವಸ್ಥೆಯಲ್ಲಿ ಬೈಂದೂರಿನವರನ್ನೂ ಪೂರ್ಣಪ್ರಮಾಣದಲ್ಲಿ ಒಳಗೊಳಿಸಲು ಸಾಧ್ಯವಾಗುತ್ತಿಲ್ಲ. ಬೈಂದೂರು ಆಸ್ಪತ್ರೆಗೆ ಡಯಾಲಿಸಿಸ್ ವ್ಯವಸ್ಥೆ ಸರ್ಕಾರದಿಂದ ನೀಡುತ್ತಿಲ್ಲ. ಆದ್ದರಿಂದ ಖಾಸಗಿ ಸಹಯೋಗದಲ್ಲಿ ಬೈಂದೂರು ಕ್ಷೇತ್ರದ 4 ಕಡೆ ಡಯಾಲಿಸಿಸ್ ಘಟಕ ತೆರೆಯಲಾಗುವುದು. ಹೊಸಂಗಡಿಯ ಕೆಪಿಸಿ ಆಸ್ಪತ್ರೆ, ಬೈಂದೂರಿನ ಅಂಜಲಿ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಒಂದು ಘಟಕ ಹಾಗೂ ಚಿತ್ರಕೂಟ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು. ದಾನಿಗಳ ಮೂಲಕ ಡಯಾಲಿಸಿಸ್ ಯಂತ್ರ, ನಿರ್ವಹಣೆಗೆ ನುರಿತ ಸಿಬಂದಿ ವ್ಯವಸ್ಥೆ ಮಾಡಲಾಗುವುದು ಎಂದರು.

    ಶಿಕ್ಷಣ ಇಲಾಖೆಯ ಶಂಕರ ಕುಲಾಲ್ ಮಾತನಾಡಿ, ಕುಂದಾಪುರದಲ್ಲಿ 10, ಬೈಂದೂರಿನಲ್ಲಿ 12 ವಿದ್ಯಾರ್ಥಿಗಳು ಕಲಿಕಾ ನ್ಯೂನತೆಯ ಸಮಸ್ಯೆಯಲ್ಲಿದ್ದಾರೆ. ಇವರಿಗೆ ಸರ್ಕಾರಿ ಆಸ್ಪತ್ರೆಯ ಮನೋವೈದ್ಯರು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದಾಗ ಶಾಸಕರು ತಕ್ಷಣ ಕ್ರಮಕೈಗೊಳ್ಳುವ ಭರವಸೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಶ್ಯಾಮಲಾ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ನಿರ್ದೇಶಕಿ ರತ್ನಾ, ತಹಶೀಲ್ದಾರ್ ಶೋಭಾಲಕ್ಷ್ಮೀ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ಸೇವಾ ಭಾರತಿ ಕನ್ಯಾಡಿಯ ವಿನಾಯಕ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಪುರಸಭೆ ಕಂದಾಯ ಅಧಿಕಾರಿ ಅಂಜನಿ ಮೊದಲಾದವರು ಇದ್ದರು.

  • ಸಾಲಿಗ್ರಾಮ – ಕಾರಂತರು ಜ್ಞಾನದ ನದಿಗಳು ಸಂಗಮಿಸಿದ ಸುಜ್ಞಾನದ ಕಡಲು – ಗುಜ್ಜಾಡಿ ಪ್ರಭಾಕರ ನಾಯಕ್

    ಸಾಲಿಗ್ರಾಮ – ಕಾರಂತರು ಜ್ಞಾನದ ನದಿಗಳು ಸಂಗಮಿಸಿದ ಸುಜ್ಞಾನದ ಕಡಲು – ಗುಜ್ಜಾಡಿ ಪ್ರಭಾಕರ ನಾಯಕ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕಾರಂತರು ಜ್ಞಾನ, ವಿಜ್ಞಾನ, ಸಂಗೀತ, ನೃತ್ಯ, ಕಲೆ, ಯಕ್ಷಗಾನ, ಪರಿಸರ ಪ್ರೇಮ ಮತ್ತು ಸಮಾಜ ಸೇವೆಗಳನ್ನು ಬದುಕಿನ ಉಸಿರಾಗಿ ರೂಪಿಸಿಕೊಳ್ಳುವುದರೊಂದಿಗೆ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವದೊಂದಿಗೆ ಸಾಹಿತಿಗಳ ಲೋಕದಲ್ಲಿ ವಿಶಿಷ್ಟವಾಗಿ ನಿಂತಿರುವ ಜ್ಞಾನದ ಕಡಲು ಎಂದು ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಸಂಶೋಧನ ಕೇಂದ್ರದ ವಿಶ್ವಸ್ಥ ಮಂಡಳಿಯ ಮುಖ್ಯಸ್ಥ ಗುಜ್ಜಾಡಿ ಪ್ರಭಾಕರ ನಾಯಕ್ ಹೇಳಿದರು.

    ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಸಂಶೋಧನ ಹಾಗೂ ಅಧ್ಯಯನ ಕೇಂದ್ರದ ರಂಗ ರಥದಲ್ಲಿ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಬದುಕು ಮತ್ತು ಬರೆಹ ಸಮಾಜಕ್ಕೆ ದಾರಿದೀಪವಾಗಬೇಕು, ಕೇಂದ್ರ ಕಾರಂತರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಪ್ರಯತ್ನಿಸಲಿದೆ ಎಂದರು.

    ಕಾರಂತರ ನಿಕಟವರ್ತಿಯಾಗಿದ್ದ ಗೆಳೆಯರ ಬಳಗದ ಸಂಸ್ಥೆಯ ಅಧ್ಯಕ್ಷ ತಾರಾನಾಥ ಹೊಳ್ಳ ಮಾತನಾಡಿ ತಾನು ಕಂಡಂತೆ ಕಾರಂತರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ಮಾಲಿನಿ ಮಲ್ಯ ಕಾರಂತರ ಕುರಿತು ಹೊಂದಿರುವ ಹೊಂದಿರುವ ಪ್ರೀತಿ ಮತ್ತು ಗೌರವ ಅನನ್ಯ ಎಂದು ತಿಳಿಸಿದರು.

    ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಗುರುರಾಜ್ ವಹಿಸಿದ್ದರು

    ಈ ಪ್ರಯುಕ್ತ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಸಾರಥ್ಯದಲ್ಲಿ ಹೂವಿನ ಕೋಲಿನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಪಿ.ಶ್ರೀಪತಿ ಹೇರ್ಳೆ , ಟ್ರಸ್ಟಿನ ಸದಸ್ಯರಾದ ಪಂಜು ಪೂಜಾರಿ ಮತ್ತು ಮಾಧವ ಪೈ,ವಸಂತಿ.ಬಿ.ಭಟ್ ,ವಿಘ್ನೇಶ್ ಭಟ್ ಉಪಸ್ಥಿತರಿದ್ದರು. ವಿವೇಕ ಕಾಮತ್ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

  • ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ

    ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಇದರ ಆಶ್ರಯದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚಿಗೆ ಸೂಲ್ಕುದ್ರು ಪರಿಸರದಲ್ಲಿ ನಡೆಯಿತು.

    2ನೇ ಅವಧಿಗೆ ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಶೀಲಾ ಸದಾನಂದ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ ಬಿ ರಾಘವೇಂದ್ರ ಇವರುಗಳನ್ನು ಸೂಲ್ಕುದ್ರು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

    ಸ್ಥಳೀಯ ಸ್ವಸಹಾಯ ಸಂಘದ ಅಧ್ಯಕ್ಷೆ ಮೇಬಲ್ ಡಿಸೋಜಾ ಮತ್ತು ತೆರೆಸಾ ಒಲಿವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಜೇಮ್ಸ್‍ಒಲಿವೇರ ವಹಿಸಿ ಸ್ವಾಗತಿಸಿದರು.

    ಸಮಿತಿಯ ಗೌರವಾಧ್ಯಕ್ಷ ಸಿಲ್ಪೆಸ್ಟರ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಎಲಿಯಾಸ್ ಒಲಿವೇರ ಧನ್ಯವಾದಗೈದರು.